ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಬೇಲಾಪುರ್ನಲ್ಲಿರುವ ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್/ಲೊಕೊ ಹುದ್ದೆಯನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.
ಈ ನೇಮಕಾತಿಯು ಸಂಪೂರ್ಣವಾಗಿ ಡೆಪ್ಯುಟೇಶನ್ (Deputation) ಆಧಾರದ ಮೇಲೆ ನಡೆಯಲಿದ್ದು, ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ IRSEE ಅಧಿಕಾರಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಧಿಕಾರಿಗಳು ಮೇ 31, 2026 ರೊಳಗೆ ನಿಗದಿತ ನಮೂನೆಯಲ್ಲಿ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL)
- ಹುದ್ದೆಯ ಹೆಸರು: ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್/ಲೊಕೊ
- ಹುದ್ದೆಗಳ ಸಂಖ್ಯೆ: 01
- ಉದ್ಯೋಗ ಸ್ಥಳ: ಬೇಲಾಪುರ್ (ಮಹಾರಾಷ್ಟ್ರ)
ಅರ್ಹತೆ ಮತ್ತು ಅನುಭವ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೂ ಒಂದು ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು:
- ಭಾರತೀಯ ರೈಲ್ವೆಯಲ್ಲಿ 7ನೇ CPC ಯ PML 12/13 ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ IRSEE ಅಧಿಕಾರಿಗಳಾಗಿರಬೇಕು. ಅಥವಾ
- 7 ನೇ CPC ಯ PML 11 ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ IRSEE ಅಧಿಕಾರಿಗಳು, ಅಥವಾ IDA ಸ್ಕೇಲ್ E-5 ಮತ್ತು E-4 ನಲ್ಲಿ ಕನಿಷ್ಠ 3 ವರ್ಷಗಳ ಕಾರ್ಯಾನುಭವ ಹೊಂದಿರುವ ಎಕ್ಸಿಕ್ಯೂಟಿವ್ಗಳು (Executive) ಆಗಿರಬೇಕು.
ವಯೋಮಿತಿ:
- ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ (ಅಂದರೆ 30 ಏಪ್ರಿಲ್ 2026 ಕ್ಕೆ) ಅಭ್ಯರ್ಥಿಯ ವಯಸ್ಸು 50 ವರ್ಷಕ್ಕಿಂತ ಕಡಿಮೆ ಇರಬೇಕು.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆಯಾದ ದಿನಾಂಕ: 30-04-2026
- ಅರ್ಜಿ (ಇ-ಮೇಲ್) ಸಲ್ಲಿಸಲು ಕೊನೆಯ ದಿನಾಂಕ: 31-05-2026
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ರೈಲ್ವೆ ಅಧಿಕಾರಿಗಳು ತಮ್ಮ ಅರ್ಜಿಯನ್ನು ಕಡ್ಡಾಯವಾಗಿ ರೈಲ್ವೆ ಮಂಡಳಿಯ (Railway Board / Zonal Railways) ಅನುಮೋದನೆಯೊಂದಿಗೆ ನಿಗದಿತ ನಮೂನೆಯಲ್ಲಿ (Proforma) ಫಾರ್ವರ್ಡ್ ಮಾಡಬೇಕು.
- ಅರ್ಜಿಯ ಕೊನೆಯ ದಿನಾಂಕಕ್ಕೂ ಕನಿಷ್ಠ 7 ದಿನಗಳ ಮುಂಚಿತವಾಗಿ ರೈಲ್ವೆ ಬೋರ್ಡ್ಗೆ ಅರ್ಜಿಯನ್ನು ಸಲ್ಲಿಸಿರಬೇಕು.
- ಇದರ ಜೊತೆಗೆ ಅಭ್ಯರ್ಥಿಗಳು ತಮ್ಮ ಅರ್ಜಿಯ ಅಡ್ವಾನ್ಸ್ ಪ್ರತಿಯನ್ನು (Advance Copy) ಅಗತ್ಯ ದಾಖಲೆಗಳೊಂದಿಗೆ hr.pdmc@krcl.co.in ಎಂಬ ಇ-ಮೇಲ್ ಐಡಿಗೆ ಮೇ 31, 2026 ರೊಳಗೆ ಕಳುಹಿಸಬೇಕು.
ಪ್ರಮುಖ ಲಿಂಕ್ಗಳು:
- ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಪಿಡಿಎಫ್: ಡೌನ್ಲೋಡ್
- ಅಧಿಕೃತ ವೆಬ್ಸೈಟ್: konkanrailway.com