ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಮೈಸೂರಿನ ಡಿಆರ್‌ಡಿಒ ‘ರಕ್ಷಣಾ ಜೈವಿಕ-ರಕ್ಷಣಾ ತಂತ್ರಜ್ಞಾನಗಳ ಸಂಸ್ಥೆ’ಯು (DRDO DIBT) ಎಂ.ಎಸ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಾವತಿಸಿದ ಇಂಟರ್ನ್‌ಶಿಪ್ ಅವಕಾಶವನ್ನು ಒದಗಿಸಿದೆ.
ಒಟ್ಟು 6 ತಿಂಗಳ ಅವಧಿಗೆ ನಡೆಯುವ ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಂದ ಇ-ಮೇಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಜೂನ್ 15, 2026 ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಡಿಆರ್‌ಡಿಒ – ರಕ್ಷಣಾ ಜೈವಿಕ-ರಕ್ಷಣಾ ತಂತ್ರಜ್ಞಾನಗಳ ಸಂಸ್ಥೆ (DRDO DIBT)
- ಒಟ್ಟು ಹುದ್ದೆಗಳ ಸಂಖ್ಯೆ: 02
- ಉದ್ಯೋಗ ಸ್ಥಳ: ಮೈಸೂರು
- ತರಬೇತಿ ಅವಧಿ: 06 ತಿಂಗಳು
ವೇತನ ಶ್ರೇಣಿಯ ವಿವರ:
- ಪೇಯ್ಡ್ ಇಂಟರ್ನ್‌ಶಿಪ್ : ಮಾಸಿಕ ರೂ. 5,000/- (ಒಟ್ಟು ರೂ. 30,000 ಗಳನ್ನು 03 ತಿಂಗಳಿಗೊಮ್ಮೆ 2 ಕಂತುಗಳಲ್ಲಿ ನೀಡಲಾಗುತ್ತದೆ).
ಶೈಕ್ಷಣಿಕ ಅರ್ಹತೆ:
- ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಬಯೋಟೆಕ್ನಾಲಜಿ ಅಥವಾ ಮೈಕ್ರೋಬಯಾಲಜಿ ವಿಷಯದಲ್ಲಿ ಅಂತಿಮ ವರ್ಷದ ಎಂ.ಎಸ್ಸಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ವಿದ್ಯಾರ್ಥಿಯು ಉತ್ತಮ ಶೈಕ್ಷಣಿಕ ದಾಖಲೆ ಹೊಂದಿರಬೇಕು (ಅಂದರೆ ಕನಿಷ್ಠ 85% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳು ಅಥವಾ 8.5 CGPA ಪಡೆದಿರಬೇಕು).
ಅರ್ಜಿ ಶುಲ್ಕ:
- ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.
ಆಯ್ಕೆ ಪ್ರಕ್ರಿಯೆ:
- ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ವಿದ್ಯಾರ್ಥಿಗಳು ಅಧಿಸೂಚನೆಯಲ್ಲಿ ನೀಡಲಾದ ನಿಗದಿತ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
- ಅರ್ಜಿಯೊಂದಿಗೆ ಹಿಂದಿನ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿಗಳು, ಕಾಲೇಜು ಪ್ರಾಧಿಕಾರದಿಂದ ಪಡೆದ ಶಿಫಾರಸು ಪತ್ರ, ಅಂಡರ್‌ಟೇಕಿಂಗ್ ಫಾರ್ಮ್, ಆಧಾರ್ ಕಾರ್ಡ್ ಮತ್ತು 300 ಪದಗಳಿಗಿಂತ ಕಡಿಮೆ ಇರುವ ಸಂಕ್ಷಿಪ್ತ ರೆಸ್ಯೂಮ್ ಅನ್ನು ಒಂದೇ ಫೈಲ್ ಆಗಿ ಸ್ಕ್ಯಾನ್ ಮಾಡಿಕೊಳ್ಳಬೇಕು.
- ಈ ಎಲ್ಲಾ ದಾಖಲೆಗಳನ್ನು centrehead.dibt@gov.in ಅಥವಾ head.hrd.dfrl@gov.in ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.
- ಇ-ಮೇಲ್ ಕಳುಹಿಸುವಾಗ ವಿಷಯದಲ್ಲಿ ಕಡ್ಡಾಯವಾಗಿ ‘Application for Paid Internship – Post Code: [Discipline Name]’ ಎಂದು ನಮೂದಿಸಿರಬೇಕು.
ಪ್ರಮುಖ ದಿನಾಂಕಗಳು:
ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2026.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ದಿನಾಂಕ: 20-06-2026.
ಇಂಟರ್ನ್‌ಶಿಪ್ ಪ್ರಾರಂಭ ದಿನಾಂಕ: 01-07-2026.
ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: drdo.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ
Indian Army Recruitment 2026: ವೇತನ 56,100 ರೂ. ಅರ್ಹರು ಅರ್ಜಿ ಸಲ್ಲಿಸಿ