ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಧಾರವಾಡದ ‘ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ’ಯಲ್ಲಿ (Karnataka State Higher Education Academy) ನಿರ್ದೇಶಕ ಹುದ್ದೆಯ ಭರ್ತಿಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಸರ್ಕಾರಿ ಅಥವಾ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ, ಸಾಕಷ್ಟು ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಇ-ಮೇಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮೇ 30, 2026 ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ
- ಒಟ್ಟು ಹುದ್ದೆಗಳ ಸಂಖ್ಯೆ: 01
- ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
- ನಿರ್ದೇಶಕ (Director) – 1 ಹುದ್ದೆ
ವೇತನ ಶ್ರೇಣಿಯ ವಿವರ:
- ನಿರ್ದೇಶಕ – ಅಭ್ಯರ್ಥಿಯು ತಮ್ಮ ಪ್ರಸ್ತುತ ಹುದ್ದೆಯ ವೇತನ ಶ್ರೇಣಿಯನ್ನು ಮುಂದುವರಿಸಲಿದ್ದು, ಅದರ ಜೊತೆಗೆ ಮಾಸಿಕ ರೂ. 10,000/- ಹೆಚ್ಚುವರಿ ನಿರ್ದೇಶಕ ಭತ್ಯೆಯನ್ನು (Director allowance) ಪಡೆಯಲಿದ್ದಾರೆ. (ನಿವೃತ್ತ ಅಧಿಕಾರಿಯನ್ನು ನೇಮಿಸಿದರೆ ನಿಯಮಾನುಸಾರ ವೇತನ ನಿಗದಿಯಾಗುತ್ತದೆ).
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪಿಎಚ್ಡಿ (Ph.D) ಪೂರ್ಣಗೊಳಿಸಿರಬೇಕು.
- ಅಭ್ಯರ್ಥಿಯು ರಾಜ್ಯ ಅಥವಾ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಪ್ರೊಫೆಸರ್ (Professor) ಆಗಿ ಕಾರ್ಯನಿರ್ವಹಿಸುತ್ತಿರಬೇಕು.
- ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕನಿಷ್ಠ 15 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವವನ್ನು ಹೊಂದಿರಬೇಕು.
- ಜೊತೆಗೆ ಕನಿಷ್ಠ 5 ವರ್ಷಗಳ ಕಾಲ ಹಿರಿಯ ಶೈಕ್ಷಣಿಕ ಆಡಳಿತಾತ್ಮಕ ವಿಭಾಗದಲ್ಲಿ (senior academic administrative position) ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
ವಯೋಮಿತಿ:
- ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 60 ವರ್ಷಗಳು ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಅಭ್ಯರ್ಥಿಗಳು ತಮ್ಮ ವಿವರವಾದ ಸಿವಿ (CV) ಮತ್ತು ಅಗತ್ಯ ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು.
- ನಿಗದಿತ ನಮೂನೆಗಾಗಿ ಅಭ್ಯರ್ಥಿಗಳು ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.
- ಭರ್ತಿ ಮಾಡಿದ ಅರ್ಜಿ ಹಾಗೂ ಸಿವಿಯನ್ನು dsuniversities@gmail.com ಎಂಬ ಇ-ಮೇಲ್ ಐಡಿಗೆ ಮೇ 30, 2026 ರ ಸಂಜೆ 05:00 ಗಂಟೆಯೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ – 19-05-2026.
- ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30-05-2026 (ಸಂಜೆ 05:00 ಗಂಟೆಯೊಳಗೆ).
ಪ್ರಮುಖ ಲಿಂಕ್ಗಳು:
ಅಧಿಕೃತ ಅಧಿಸೂಚನೆ: ಡೌನ್ಲೋಡ್
ಅಧಿಕೃತ ವೆಬ್ಸೈಟ್: hed.karnataka.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ
KEA Recruitment 2026: 06 ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
CESCOM Recruitment 2026: 200 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಿ