ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 27,000 ರೂ. – 83,700 ರೂ.

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆಗೆ ಮೈಸೂರು ಜಿಲ್ಲಾ ನ್ಯಾಯಾಲಯವು ಬಂಪರ್ ಅವಕಾಶ ನೀಡಿದೆ. ತನ್ನ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಒಟ್ಟು 93 ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು 93 ಹುದ್ದೆಗಳ ಪೈಕಿ ಅತಿ ಹೆಚ್ಚು ಅಂದರೆ 75 ಜವಾನ (Peon) ಹುದ್ದೆಗಳಿದ್ದು, 10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಆದೇಶ ಜಾರಿಕಾರರು (11), ಬೆರಳಚ್ಚು ನಕಲುಗಾರರು (03) ಹಾಗೂ ಶೀಘ್ರಲಿಪಿಗಾರರು ಗ್ರೇಡ್-III (04) ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 28, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 31, 2026 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಸಲು ಜೂನ್ 02, 2026 ರವರೆಗೆ ಕಾಲಾವಕಾಶ ನೀಡಲಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು
  • ಹುದ್ದೆಯ ಹೆಸರು: ಜವಾನ, ಆದೇಶ ಜಾರಿಕಾರ, ಬೆರಳಚ್ಚು ನಕಲುಗಾರ, ಶೀಘ್ರಲಿಪಿಗಾರ
  • ವೇತನ ಶ್ರೇಣಿ: ಹುದ್ದೆಗಳಿಗೆ ಅನುಗುಣವಾಗಿ 27,000 ರೂ. – 83,700 ರೂ.
  • ಹುದ್ದೆಗಳ ಸಂಖ್ಯೆ: 93
  • ಉದ್ಯೋಗ ಸ್ಥಳ: ಮೈಸೂರು, ಕರ್ನಾಟಕ

ಹುದ್ದೆಗಳ ವಿವರ:

  • ಜವಾನರು (Peon): 75 ಹುದ್ದೆಗಳು
  • ಆದೇಶ ಜಾರಿಕಾರರು (Process Server): 11 ಹುದ್ದೆಗಳು
  • ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III): 04 ಹುದ್ದೆಗಳು
  • ಬೆರಳಚ್ಚು ನಕಲುಗಾರರು (Copyist): 03 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಜವಾನರು (Peon): 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಆದೇಶ ಜಾರಿಕಾರರು: 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಬೆರಳಚ್ಚು ನಕಲುಗಾರರು: ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಜೊತೆಗೆ ಕನ್ನಡ ಮತ್ತು ಆಂಗ್ಲ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು ಮತ್ತು ಕಂಪ್ಯೂಟರ್ ಬಳಕೆಯ ಜ್ಞಾನ ಇರಬೇಕು.
  • ಶೀಘ್ರಲಿಪಿಗಾರರು ಗ್ರೇಡ್-III: ದ್ವಿತೀಯ ಪಿಯುಸಿ ಅಥವಾ 3 ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟಿಸ್. ಜೊತೆಗೆ ಕನ್ನಡ ಮತ್ತು ಆಂಗ್ಲ ಹಿರಿಯ ಶ್ರೇಣಿ ಬೆರಳಚ್ಚು ಹಾಗೂ ಶೀಘ್ರಲಿಪಿ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವೇತನ ಶ್ರೇಣಿ:

  • ಜವಾನರು: 27,000 ರೂ. – 46,675 ರೂ.
  • ಆದೇಶ ಜಾರಿಕಾರರು: 31,775 ರೂ. – 61,300 ರೂ.
  • ಬೆರಳಚ್ಚು ನಕಲುಗಾರರು: 34,100 ರೂ. – 67,600 ರೂ.
  • ಶೀಘ್ರಲಿಪಿಗಾರರು ಗ್ರೇಡ್-III: 44,425 ರೂ. – 83,700 ರೂ.

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯೋಮಿತಿ:
    • ಸಾಮಾನ್ಯ ವರ್ಗ: 40 ವರ್ಷ
    • 2A, 2B, 3A, 3B ವರ್ಗ: 43 ವರ್ಷ
    • ಪ.ಜಾತಿ, ಪ.ಪಂಗಡ, ಪ್ರವರ್ಗ-1: 45 ವರ್ಷ
  • ವಿಶೇಷ ಸೂಚನೆ: ಎಲ್ಲಾ ಪ್ರವರ್ಗಗಳಿಗೂ ಒಮ್ಮೆ ಮಾತ್ರ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ: 200 ರಿಂದ 300 ರೂ. (ಹುದ್ದೆಗೆ ಅನುಗುಣವಾಗಿ)
  • 2A, 2B, 3A, 3B ವರ್ಗ: 100 ರಿಂದ 150 ರೂ.
  • ಪ.ಜಾತಿ, ಪ.ಪಂಗಡ, ಪ್ರವರ್ಗ-1, ಅಂಗವಿಕಲ: ಯಾವುದೇ ಶುಲ್ಕವಿಲ್ಲ

ಆಯ್ಕೆ ವಿಧಾನ:

  • ಜವಾನ & ಆದೇಶ ಜಾರಿಕಾರ: 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುವುದು.
  • ಶೀಘ್ರಲಿಪಿಗಾರ & ಬೆರಳಚ್ಚು ನಕಲುಗಾರ: ಅರ್ಹತಾ ಪರೀಕ್ಷೆಯ ಅಂಕಗಳು, ಕೌಶಲ್ಯ ಪರೀಕ್ಷೆ (ಟೈಪಿಂಗ್ ಟೆಸ್ಟ್) ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 28-04-2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-05-2026 (ರಾತ್ರಿ 11:59 ವರೆಗೆ)
  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: 02-06-2026

ಪ್ರಮುಖ ಲಿಂಕ್‌ಗಳು:

ಕರ್ನಾಟಕ ಹೈಕೋರ್ಟ್‌ನಲ್ಲಿ 101 ಗ್ರೂಪ್-ಡಿ ಹುದ್ದೆಗಳ ನೇಮಕಾತಿ

SSC ಸ್ಟೆನೋಗ್ರಾಫರ್ ನೇಮಕಾತಿ 2026

Leave a Comment