ಭಾರತೀಯ ಸೇನೆಯು (Indian Army) ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಯುವಕರಿಗೆ ಅತ್ಯುತ್ತಮ ಅವಕಾಶವನ್ನು ಕಲ್ಪಿಸಿದೆ. 2027 ರ ಜನವರಿಯಲ್ಲಿ ಪ್ರಾರಂಭವಾಗಲಿರುವ 144ನೇ ತಾಂತ್ರಿಕ ಪದವಿ ಕೋರ್ಸ್ (Technical Graduate Course – TGC-144) ಪ್ರವೇಶಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೇಶಸೇವೆಗೆ ಸೇರಬಯಸುವ ಆಸಕ್ತರು ಜೂನ್ 11, 2026 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಭಾರತೀಯ ಸೇನೆ (Indian Army)
- ಒಟ್ಟು ಹುದ್ದೆಗಳ ಸಂಖ್ಯೆ: 30
- ವೇತನ: 56,100 ರಿಂದ 2,50,000
- ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
- ತಾಂತ್ರಿಕ ಪದವಿ ಕೋರ್ಸ್ (TGC-144): 30 ಹುದ್ದೆಗಳು
ವೇತನ ಶ್ರೇಣಿಯ ವಿವರ: ತರಬೇತಿ ಮುಗಿದು ಕಮಿಷನ್ ಆದ ನಂತರ ಲೆಫ್ಟಿನೆಂಟ್ ಶ್ರೇಣಿಯಿಂದ ವೇತನ ಆರಂಭವಾಗಲಿದ್ದು, ಶ್ರೇಣಿಗನುಗುಣವಾಗಿ ಮಾಸಿಕ ವೇತನ ಹೀಗಿದೆ:
- ಲೆಫ್ಟಿನೆಂಟ್ – ರೂ. 56,100 ರಿಂದ 1,77,500/-
- ಕ್ಯಾಪ್ಟನ್ – ರೂ. 61,300 ರಿಂದ 1,93,900/-
- ಮೇಜರ್ – ರೂ. 69,400 ರಿಂದ 2,07,200/-
- ಲೆಫ್ಟಿನೆಂಟ್ ಕರ್ನಲ್ – ರೂ. 1,21,200 ರಿಂದ 2,12,400/-
- ಕರ್ನಲ್ – ರೂ. 1,30,600 ರಿಂದ 2,15,900/-
- ಬ್ರಿಗೇಡಿಯರ್ – ರೂ. 1,39,600 ರಿಂದ 2,17,600/-
- ಮೇಜರ್ ಜನರಲ್ – ರೂ. 1,44,200 ರಿಂದ 2,18,200/-
- ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ – ರೂ. 1,82,200 ರಿಂದ 2,24,100/-
- ಲೆಫ್ಟಿನೆಂಟ್ ಜನರಲ್ HAG + ಸ್ಕೇಲ್ – ರೂ. 2,05,400 ರಿಂದ 2,24,400/-
- VCOAS / ಸೇನಾ ಕಮಾಂಡರ್ / ಲೆಫ್ಟಿನೆಂಟ್ ಜನರಲ್ (NFSG) – ರೂ. 2,25,000/-
- COAS – ರೂ. 2,50,000/-
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಧಿಸೂಚನೆಯಲ್ಲಿ ಸೂಚಿಸಿರುವ ವಿಭಾಗಗಳಲ್ಲಿ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿಯನ್ನು (Engineering Degree) ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಜನವರಿ 01, 2027 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು ಮೀರಿರಬಾರದು.
ಅರ್ಜಿ ಶುಲ್ಕ:
- ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.
ಆಯ್ಕೆ ಪ್ರಕ್ರಿಯೆ:
- ಅರ್ಜಿಗಳ ಶಾರ್ಟ್‌ಲಿಸ್ಟಿಂಗ್, ಎಸ್‌ಎಸ್‌ಬಿ ಸಂದರ್ಶನ (SSB Interview), ವೈದ್ಯಕೀಯ ಪರೀಕ್ಷೆ ಮತ್ತು ಅಂತಿಮ ಅರ್ಹತಾ ಪಟ್ಟಿಯ (Merit List) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು ಮೊದಲಿಗೆ ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ (www.joinindianarmy.nic.in) ಭೇಟಿ ನೀಡಬೇಕು.
- ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಕೇಳಲಾಗಿರುವ ಎಲ್ಲಾ ನಿಖರ ಮಾಹಿತಿಗಳನ್ನು ಭರ್ತಿ ಮಾಡಬೇಕು.
- ಶೈಕ್ಷಣಿಕ ಅಂಕಪಟ್ಟಿಗಳು, ವಯಸ್ಸಿನ ಪುರಾವೆ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
- ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 13-05-2026.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-06-2026 (ಮಧ್ಯಾಹ್ನ 03:00 ಗಂಟೆಯವರೆಗೆ).
ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: joinindianarmy.nic.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ
KEA Recruitment 2026: 06 ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
CESCOM Recruitment 2026: 200 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ