ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 731 ಸ್ಟೆನೋಗ್ರಾಫರ್ (Stenographer Grade ‘C’ & ‘D’) ಹುದ್ದೆಗಳ ಭರ್ತಿಗೆ ಸಿಬ್ಬಂದಿ ಆಯ್ಕೆ ಆಯೋಗವು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಹೊಸ ಅಧಿಕೃತ ವೆಬ್‌ಸೈಟ್‌ಗೆ (ssc.gov.in) ಭೇಟಿ ನೀಡಿ, ಮೊದಲು ‘ಒನ್-ಟೈಮ್ ರಿಜಿಸ್ಟ್ರೇಷನ್’ (OTR – One Time Registration) ಪೂರ್ಣಗೊಳಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 24, 2026 ರಿಂದ ಆರಂಭವಾಗಿದ್ದು, ಮೇ 15, 2026 ರಂದು ರಾತ್ರಿ 11:00 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಹಾಗೂ ಸ್ಟೆನೋಗ್ರಫಿ ಕೌಶಲ್ಯವನ್ನು (Stenography Skills) ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಸಿಬ್ಬಂದಿ ಆಯ್ಕೆ ಆಯೋಗ
- ಹುದ್ದೆಯ ಹೆಸರು: ಸ್ಟೆನೋಗ್ರಾಫರ್ ಗ್ರೇಡ್ ‘ಸಿ’
- ಒಟ್ಟು ಹುದ್ದೆಗಳ ಸಂಖ್ಯೆ: 731 (ಅಂದಾಜು)
- ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ಸೂಚನೆ: ಅಭ್ಯರ್ಥಿಗಳು ಆಗಸ್ಟ್ 01, 2026 ರ ಒಳಗಾಗಿ ತಮ್ಮ ವಿದ್ಯಾರ್ಹತೆಯನ್ನು (12ನೇ ತರಗತಿ ಫಲಿತಾಂಶ ಪ್ರಕಟವಾಗಿರಬೇಕು) ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಸ್ಟೆನೋಗ್ರಾಫರ್ ಗ್ರೇಡ್ ‘C’:
- ಕನಿಷ್ಠ 18 ವರ್ಷ,
- ಗರಿಷ್ಠ 30 ವರ್ಷ
- (02-08-1996 ರಿಂದ 01-08-2008 ರ ನಡುವೆ ಜನಿಸಿರಬೇಕು).
- ಸ್ಟೆನೋಗ್ರಾಫರ್ ಗ್ರೇಡ್ ‘D’:
- ಕನಿಷ್ಠ 18 ವರ್ಷ,
- ಗರಿಷ್ಠ 27 ವರ್ಷ
- (02-08-1999 ರಿಂದ 01-08-2008 ರ ನಡುವೆ ಜನಿಸಿರಬೇಕು).
ವಯೋಮಿತಿ ಸಡಿಲಿಕೆ:
- SC/ST ಅಭ್ಯರ್ಥಿಗಳಿಗೆ: 5 ವರ್ಷ
- OBC ಅಭ್ಯರ್ಥಿಗಳಿಗೆ: 3 ವರ್ಷ
- PwBD (UR/EWS): 10 ವರ್ಷ
- PwBD (OBC): 13 ವರ್ಷ
- PwBD (SC/ST): 15 ವರ್ಷ
- ಮಾಜಿ ಸೈನಿಕರಿಗೆ (Ex-Servicemen): 3 ವರ್ಷ (ಮಿಲಿಟರಿ ಸೇವೆಯನ್ನು ಕಳೆದ ನಂತರ).
ಅರ್ಜಿ ಶುಲ್ಕ:
- ಸಾಮಾನ್ಯ (UR) ಮತ್ತು ಒಬಿಸಿ (OBC) ಪುರುಷ ಅಭ್ಯರ್ಥಿಗಳಿಗೆ: ರೂ. 100/-
- ಮಹಿಳೆಯರು, SC/ST, PwBD ಮತ್ತು ಮಾಜಿ ಸೈನಿಕರಿಗೆ (ESM): ಅರ್ಜಿ ಶುಲ್ಕವಿರುವುದಿಲ್ಲ
- ಪಾವತಿ ವಿಧಾನ: ಆನ್‌ಲೈನ್ ಮೂಲಕ
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 24-04-2026
- ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15-05-2026
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 16-05-2026
ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ ಪಿಡಿಎಫ್: ಡೌನ್ಲೋಡ್
- ಆನ್‌ಲೈನ್ ಅರ್ಜಿ : Apply ಮಾಡಿ
- ಅಧಿಕೃತ ವೆಬ್ಸೈಟ್: ssc.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ