ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನೇಮಕಾತಿ 2026; ಅರ್ಜಿ ಆಹ್ವಾನ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (Central University of Karnataka – CUK) ಯಾದಗಿರಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 (DHDR-2025) ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಡೇಟಾ ಎಂಟ್ರಿ ಆಪರೇಟರ್ ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಯೋಜನಾ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆಯುತ್ತಿರುವ ಈ ಪ್ರಾಜೆಕ್ಟ್‌ಗಾಗಿ ಗುತ್ತಿಗೆ ಆಧಾರದ (Contractual Basis) ಮೇಲೆ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಏಪ್ರಿಲ್ 23, 2026 ರಂದು ನಡೆಯುವ ನೇರ ಸಂದರ್ಶನಕ್ಕೆ (Walk-in Interview) ಹಾಜರಾಗಬಹುದು.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK)
  • ಹುದ್ದೆಯ ಹೆಸರು: ಡೇಟಾ ಎಂಟ್ರಿ ಆಪರೇಟರ್ (Data Entry Operator)
  • ವೇತನ ಶ್ರೇಣಿ: ಮಾಸಿಕ ರೂ. 30,000/-
  • ಹುದ್ದೆಗಳ ಸಂಖ್ಯೆ: 01
  • ಉದ್ಯೋಗ ಸ್ಥಳ: ಕಲಬುರಗಿ

ಶೈಕ್ಷಣಿಕ ಅರ್ಹತೆ:

  • ಕಡ್ಡಾಯ ಅರ್ಹತೆ (Essential): ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Sc (Statistics) / MA (Economics) / MBA / M.Com ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಅಪೇಕ್ಷಿತ ಅರ್ಹತೆ (Desirable): ಕಂಪ್ಯೂಟರ್ ಬಳಕೆಯ ಜ್ಞಾನ, ಡೇಟಾ ವಿಶ್ಲೇಷಣೆ (Data Analysis) ಮತ್ತು ವರದಿ ಬರೆಯುವ (Report writing) ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ವಯೋಮಿತಿ:

  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿರ್ಧರಿಸಲಾಗುತ್ತದೆ.

ಆಯ್ಕೆ ವಿಧಾನ:

  • ವಾಕ್-ಇನ್ ಸಂದರ್ಶನ (Walk-in Interview): ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆ ದಿನಾಂಕ: 15-04-2026
  • ವಾಕ್-ಇನ್-ಇಂಟರ್ವ್ಯೂ ದಿನಾಂಕ: 23-04-2026
  • ಸಂದರ್ಶನದ ಸಮಯ: ಮಧ್ಯಾಹ್ನ 3:00 ಗಂಟೆಗೆ

ಸಂದರ್ಶನಕ್ಕೆ ಹಾಜರಾಗುವ ವಿಧಾನ

  1. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ನವೀಕರಿಸಿದ ಬಯೋ-ಡೇಟಾವನ್ನು (Updated CV) ಸಂದರ್ಶನಕ್ಕೂ ಮುನ್ನ registrar@cuk.ac.in ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.
  2. ಏಪ್ರಿಲ್ 23 ರಂದು ಮಧ್ಯಾಹ್ನ 3:00 ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಬಯೋ-ಡೇಟಾ (Bio-Data) ಹಾಗೂ ಎಲ್ಲಾ ಮೂಲ ಶೈಕ್ಷಣಿಕ ದಾಖಲಾತಿಗಳೊಂದಿಗೆ (Original Testimonials) ಖುದ್ದಾಗಿ ಹಾಜರಾಗಬೇಕು.

ಸಂದರ್ಶನ ನಡೆಯುವ ಸ್ಥಳ: ರಿಜಿಸ್ಟ್ರಾರ್ ಕಚೇರಿ (O/o. of Registrar), ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK), ಆಳಂದ್ ರಸ್ತೆ, ಕಡಗಂಚಿ, ಕಲಬುರಗಿ – 585367.

ಪ್ರಮುಖ ಲಿಂಕ್‌ಗಳು:

SSC ಸ್ಟೆನೋಗ್ರಾಫರ್ ನೇಮಕಾತಿ 2026

ಬೆಂಗಳೂರಿನ ಪೂರ್ವ ನಗರ ಪಾಲಿಕೆ ನೇಮಕಾತಿ 2026

Leave a Comment