ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ‘ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ’ (RLDA) ಯು ದೇಶಾದ್ಯಂತ ಇರುವ ತನ್ನ ವಿವಿಧ ಪ್ರಾಜೆಕ್ಟ್‌ಗಳಿಗಾಗಿ ಸೈಟ್ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಒಟ್ಟು 40 ಸೈಟ್ ಎಂಜಿನಿಯರ್ (ಸಿವಿಲ್ ಮತ್ತು ಎಲೆಕ್ಟ್ರಿಕಲ್) ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಬಿ.ಇ ಅಥವಾ ಬಿ.ಟೆಕ್ (ಸಿವಿಲ್/ಎಲೆಕ್ಟ್ರಿಕಲ್) ಪೂರ್ಣಗೊಳಿಸಿರುವ ಯುವ ಮತ್ತು ಉತ್ಸಾಹಿ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 76,000 ರೂ.ಗಳ ಆಕರ್ಷಕ ಸಂಭಾವನೆ ನೀಡಲಾಗುವುದು. ಆಸಕ್ತರು ಮೇ 22, 2026 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಇ-ಮೇಲ್ (E-mail) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ (RLDA)
- ಹುದ್ದೆಯ ಹೆಸರು: ಸೈಟ್ ಎಂಜಿನಿಯರ್
- ಒಟ್ಟು ಹುದ್ದೆಗಳ ಸಂಖ್ಯೆ: 40
- ವೇತನ ಶ್ರೇಣಿ: ಮಾಸಿಕ 76,000 ರೂ.
- ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ (Civil Engineering) ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ( B.E / B.Tech) ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ (ಅಂದರೆ 22-05-2026 ಕ್ಕೆ) ಅನ್ವಯವಾಗುವಂತೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳುಮೀರಿರಬಾರದು.
- (ವಯೋಮಿತಿ ಸಡಿಲಿಕೆಯು RLDA ನಿಯಮಗಳ ಪ್ರಕಾರ ಅನ್ವಯವಾಗುತ್ತದೆ).
ಅರ್ಜಿ ಶುಲ್ಕ:
- ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.
ಆಯ್ಕೆ ವಿಧಾನ:
- ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ (Interview) ಕರೆಯುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಪ್ರಕಟವಾದ ದಿನಾಂಕ: 02-05-2026
- ಇ-ಮೇಲ್ ಕಲುಹಿಸುವ ಕೊನೆಯ ದಿನಾಂಕ: 22-05-2026
ಅರ್ಜಿ ಸಲ್ಲಿಸುವ ವಿಧಾನ:
- ಮೊದಲನೆಯದಾಗಿ RLDA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೇಮಕಾತಿ ಅಧಿಸೂಚನೆ ಮತ್ತು ಅದರ ಜೊತೆಗಿರುವ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿಕೊಳ್ಳಿ.
- ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದು, ಅದರಲ್ಲಿ ಕೇಳಲಾಗಿರುವ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
- ಅರ್ಜಿಯ ಪ್ರತಿಯೊಂದು ಪುಟದಲ್ಲೂ ಅಭ್ಯರ್ಥಿಯು ಕಡ್ಡಾಯವಾಗಿ ಸಹಿ (Signature) ಮಾಡಬೇಕು.
- ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ, ನಿಮ್ಮ ಅಪ್‌ಡೇಟ್ ಆದ CV (ಬಯೋ-ಡೇಟಾ), ಶೈಕ್ಷಣಿಕ ಅಂಕಪಟ್ಟಿಗಳು, ವಯಸ್ಸಿನ ಪುರಾವೆ ಹಾಗೂ ಪ್ರಸ್ತುತ ಬೇರೆಡೆ ಕೆಲಸ ಮಾಡುತ್ತಿದ್ದರೆ (NOC, ಪೇ-ಸ್ಲಿಪ್) ಅದರ ದಾಖಲೆಗಳನ್ನು ಒಟ್ಟುಗೂಡಿಸಿ ಸ್ಕ್ಯಾನ್ ಮಾಡಿ ಒಂದೇ ಪಿಡಿಎಫ್ (PDF) ಫೈಲ್ ಮಾಡಿಕೊಳ್ಳಿ.
- ಈ ಪಿಡಿಎಫ್ ಫೈಲ್ ಅನ್ನು site.engg.rlda@gmail.com ಎಂಬ ಇ-ಮೇಲ್ ಐಡಿಗೆ ಮೇ 22, 2026 ರೊಳಗೆ ತಲುಪುವಂತೆ ಕಳುಹಿಸಬೇಕು.
ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
- ಅಧಿಕೃತ ವೆಬ್‌ಸೈಟ್: rlda.indianrailways.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ