RVNL ನೇಮಕಾತಿ 2026: ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್) ಹುದ್ದೆಗೆ ಅರ್ಜಿ ಆಹ್ವಾನ

ಕೇಂದ್ರ ರೈಲ್ವೆ ಸಚಿವಾಲಯದ ಅಧೀನದಲ್ಲಿ ಬರುವ ನವರತ್ನ ಸಂಸ್ಥೆಯಾದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಬೆಂಗಳೂರಿನಲ್ಲಿ ಖಾಲಿ ಇರುವ ಉನ್ನತ ಹುದ್ದೆಯೊಂದರ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್) ಹುದ್ದೆಗೆ ಡೆಪ್ಯುಟೇಶನ್ (Deputation) ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ಪ್ರಸ್ತುತ ಸೇವೆಯಲ್ಲಿರುವ ಅರ್ಹ IRSEE / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಧಿಕಾರಿಗಳು ಜೂನ್ 04, 2026 ರೊಳಗೆ ನಿಗದಿತ ನಮೂನೆಯಲ್ಲಿ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL)
  • ಹುದ್ದೆಯ ಹೆಸರು: ಜನರಲ್ ಮ್ಯಾನೇಜರ್ – ಎಲೆಕ್ಟ್ರಿಕಲ್ (General Manager – Electrical)
  • ಒಟ್ಟು ಹುದ್ದೆಗಳ ಸಂಖ್ಯೆ: 01
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
  • ವೇತನ ಶ್ರೇಣಿ: 1,00,000 – 2,80,000

ಅರ್ಹತೆ ಮತ್ತು ಅನುಭವ (Eligibility & Experience): ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು IRSEE / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಾಗಿರಬೇಕು ಮತ್ತು ಈ ಕೆಳಗಿನ ಯಾವುದಾದರೂ ಒಂದು ವೇತನ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿರಬೇಕು:

  • ಲೆವೆಲ್-14 (CDA) / IDA E-8 (ರೂ. 1,20,000 – 2,80,000/-) ಶ್ರೇಣಿಯ ಹುದ್ದೆಯಲ್ಲಿರುವವರು. ಅಥವಾ
  • ಲೆವೆಲ್-13 (CDA) ಶ್ರೇಣಿಯಲ್ಲಿರುವವರು ಮತ್ತು ಗ್ರೂಪ್ ‘A’ ನಲ್ಲಿ 17 ವರ್ಷಗಳ ಸೇವಾ ಅನುಭವ ಹೊಂದಿರುವವರು. ಅಥವಾ
  • IDA E-7 (ರೂ. 1,00,000 – 2,60,000/-) ಶ್ರೇಣಿಯಲ್ಲಿ ಕನಿಷ್ಠ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರು.
  • ಅಪೇಕ್ಷಿತ ಅನುಭವ: ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್‌ಗಳು, ರೈಲ್ವೆ ಎಲೆಕ್ಟ್ರಿಫಿಕೇಶನ್, ರೋಲಿಂಗ್ ಸ್ಟಾಕ್ ಪ್ರೊಡಕ್ಷನ್ ಅಥವಾ ಮೆಟ್ರೋ ಪ್ರಾಜೆಕ್ಟ್‌ಗಳ ಅನುಷ್ಠಾನದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ವಯೋಮಿತಿ:

ಅಭ್ಯರ್ಥಿಯ ಗರಿಷ್ಠ ವಯಸ್ಸು 58 ವರ್ಷಗಳಿಗಿಂತ ಕಡಿಮೆ ಇರಬೇಕು.

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆಯಾದ ದಿನಾಂಕ: 05-05-2026
  • ಅರ್ಜಿ (ಇ-ಮೇಲ್) ಸಲ್ಲಿಸಲು ಕೊನೆಯ ದಿನಾಂಕ: 04-06-2026

ಅರ್ಜಿ ಸಲ್ಲಿಸುವ ವಿಧಾನ:

  1. ಅರ್ಹ ಅಧಿಕಾರಿಗಳು RVNL ನ ಅಧಿಕೃತ ವೆಬ್‌ಸೈಟ್‌ನಿಂದ ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು (Proforma) ಡೌನ್‌ಲೋಡ್ ಮಾಡಿಕೊಳ್ಳಬೇಕು.
  2. ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಸಹಿ ಮಾಡಬೇಕು.
  3. ಭರ್ತಿ ಮಾಡಿದ ಅರ್ಜಿಯನ್ನು ಸ್ಕ್ಯಾನ್ ಮಾಡಿ ಒಂದೇ ಪಿಡಿಎಫ್ (PDF) ಫೈಲ್ ಮಾಡಿಕೊಳ್ಳಬೇಕು.
  4. ಈ ಪಿಡಿಎಫ್ ಫೈಲ್ ಅನ್ನು rvnl.deputation@rvnl.org ಎಂಬ ಇ-ಮೇಲ್ ಐಡಿಗೆ ಜೂನ್ 04, 2026 ರೊಳಗೆ ಕಳುಹಿಸಬೇಕು.
  5. ಇದರ ಜೊತೆಗೆ, Zonal Railways/PSU ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ‘Proper Channel’ ಮೂಲಕ (Vigilance/DAR clearance ಮತ್ತು ಕೊನೆಯ 5 ವರ್ಷಗಳ APAR ಗಳೊಂದಿಗೆ) ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಬೇಕು.

ಪ್ರಮುಖ ಲಿಂಕ್‌ಗಳು:

  • ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
  • ಅಧಿಕೃತ ವೆಬ್‌ಸೈಟ್: rvnl.org

SSC ಸ್ಟೆನೋಗ್ರಾಫರ್ ನೇಮಕಾತಿ 2026

Leave a Comment