ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (CESCOM) 2026-27ನೇ ಸಾಲಿನ 1 ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಕರ್ನಾಟಕ ರಾಜ್ಯದ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಅಲ್ಲದ ಸಾಮಾನ್ಯ ಪದವೀಧರರಿಗೆ ಒಟ್ಟು 200 ಹುದ್ದೆಗಳನ್ನು ಮೀಸಲಿಡಲಾಗಿದೆ. ಮೈಸೂರಿನಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಮೇ 29, 2026 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (CESC ಮೈಸೂರು)
- ಒಟ್ಟು ಹುದ್ದೆಗಳ ಸಂಖ್ಯೆ: 200
- ಸಂಬಳ: 10,900 ರೂ. ರಿಂದ 12,300 ರೂ.
- ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
- ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್: 80 ಹುದ್ದೆಗಳು
- ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್: 55 ಹುದ್ದೆಗಳು
- ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ): 65 ಹುದ್ದೆಗಳು
ಮಾಸಿಕ ಸ್ಟೈಫಂಡ್ ವಿವರ:
- ಎಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್: ರೂ. 12,300/-
- ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್: ರೂ. 10,900/-
- ಪದವೀಧರ ಅಪ್ರೆಂಟಿಸ್ (ಎಂಜಿನಿಯರಿಂಗ್ ಅಲ್ಲದ): ರೂ. 12,300/-
ಶೈಕ್ಷಣಿಕ ಅರ್ಹತೆ:
- ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅಭ್ಯರ್ಥಿಗಳು 2022, 2023, 2024, 2025 ಅಥವಾ 2026 ನೇ ಇಸವಿಯಲ್ಲಿ ತಮ್ಮ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
- ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿ.ಇ / ಬಿ.ಟೆಕ್, ಡಿಪ್ಲೊಮಾ, ಅಥವಾ ಬಿ.ಕಾಂ, ಬಿಬಿಎ, ಬಿಎ, ಬಿಸಿಎ, ಬಿ.ಎಸ್ಸಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪ್ರಕಾರ ಅಭ್ಯರ್ಥಿಗೆ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು.
ಅರ್ಜಿ ಶುಲ್ಕ:
- ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.
ಆಯ್ಕೆ ಪ್ರಕ್ರಿಯೆ:
- ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.
- ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಇ-ಮೇಲ್ ಐಡಿ ಮೂಲಕ ಮಾಹಿತಿಯನ್ನು ನೀಡಲಾಗುವುದು.
- ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನ ವಿಜಯನಗರದಲ್ಲಿರುವ CESC ಕಾರ್ಪೊರೇಟ್ ಕಚೇರಿಯಲ್ಲಿ ನಡೆಯುವ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 08-05-2026.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-05-2026.
ಪ್ರಮುಖ ಲಿಂಕ್ಗಳು:
ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ಸೈಟ್: cescmysore.karnataka.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ
NCCBM Notification 2026; ವ್ಯವಸ್ಥಾಪಕ, ಸಹಾಯಕರು ಹುದ್ದೆಗಳ ನೇಮಕಾತಿ
NIELIT ನಲ್ಲಿ 75 ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಆಫ್ಲೈನ್ ಅರ್ಜಿ ಆಹ್ವಾನ