NCCBM Notification 2026; ವ್ಯವಸ್ಥಾಪಕ, ಸಹಾಯಕರು ಹುದ್ದೆಗಳ ನೇಮಕಾತಿ

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ (DPIIT) ಆಡಳಿತ ನಿಯಂತ್ರಣದಲ್ಲಿರುವ ಪ್ರಮುಖ ಸಂಸ್ಥೆಯಾದ ‘ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಅಂಡ್ ಬಿಲ್ಡಿಂಗ್ ಮೆಟೀರಿಯಲ್ಸ್’ (NCCBM) ನೇರ ನೇಮಕಾತಿಯ ಮೂಲಕ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಒಟ್ಟು 26 ಉಪ ವ್ಯವಸ್ಥಾಪಕ, ವ್ಯವಸ್ಥಾಪಕ, ಗುಂಪು ವ್ಯವಸ್ಥಾಪಕ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಜೂನ್ 08, 2026 ರೊಳಗೆ ಆಫ್‌ಲೈನ್ (ಅಂಚೆ) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಅಂಡ್ ಬಿಲ್ಡಿಂಗ್ ಮೆಟೀರಿಯಲ್ಸ್ (NCCBM)
  • ಒಟ್ಟು ಹುದ್ದೆಗಳ ಸಂಖ್ಯೆ: 26
  • ಉದ್ಯೋಗ ಸ್ಥಳ: All india

ಹುದ್ದೆಗಳ ವಿವರ:

  • ಉಪ ವ್ಯವಸ್ಥಾಪಕರು – 14 ಹುದ್ದೆಗಳು
  • ವ್ಯವಸ್ಥಾಪಕ – 8 ಹುದ್ದೆಗಳು
  • ಗುಂಪು ವ್ಯವಸ್ಥಾಪಕರು – 1 ಹುದ್ದೆ
  • ಕಚೇರಿ ಸಹಾಯಕರು – 1 ಹುದ್ದೆ
  • ಸಹಾಯಕ (ಹಿಂದಿ) – 1 ಹುದ್ದೆ
  • ಆಡಳಿತ ಸಹಾಯಕ – 1 ಹುದ್ದೆ

ವೇತನ ಶ್ರೇಣಿಯ ವಿವರ:

  • ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7th CPC) ಅನ್ವಯ ಆಯಾ ಹುದ್ದೆಗಳ ಲೆವೆಲ್ ಪ್ರಕಾರ ಆಕರ್ಷಕ ವೇತನ ಹಾಗೂ ಸಂಸ್ಥೆಯ ನಿಯಮಗಳ ಪ್ರಕಾರ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

  • ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಬಿಎ, ಬಿಇ/ಬಿ.ಟೆಕ್, ಯಾವುದೇ ಪದವಿ, ಎಂ.ಎಸ್ಸಿ, ಎಂಇ/ಎಂ.ಟೆಕ್ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಇದರ ಜೊತೆಗೆ ಸಂಬಂಧಿತ ವಲಯದಲ್ಲಿ ನಿಗದಿತ ಕಾರ್ಯಾನುಭವ ಹೊಂದಿರಬೇಕು.

ವಯೋಮಿತಿ:

  • ಅಭ್ಯರ್ಥಿಯ ಗರಿಷ್ಠ ವಯಸ್ಸು 25 ರಿಂದ 40 ವರ್ಷಗಳ ಒಳಗಿರಬೇಕು (ಹುದ್ದೆಗೆ ಅನುಗುಣವಾಗಿ).
  • ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  1. ಅರ್ಹ ಅಭ್ಯರ್ಥಿಗಳು ಎನ್‌ಸಿಬಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
  2. ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರವನ್ನು ಅಂಟಿಸಬೇಕು.
  3. ಶೈಕ್ಷಣಿಕ ಅಂಕಪಟ್ಟಿಗಳು, ವಯಸ್ಸಿನ ಪುರಾವೆ, ಜಾತಿ ಪ್ರಮಾಣಪತ್ರ ಹಾಗೂ ಅನುಭವದ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು.
  4. ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು (ಇ-ಮೇಲ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ).
  • ಅರ್ಜಿ ಕಳುಹಿಸಬೇಕಾದ ವಿಳಾಸ: ದಿ ಡೈರೆಕ್ಟರ್ ಜನರಲ್, ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಅಂಡ್ ಬಿಲ್ಡಿಂಗ್ ಮೆಟೀರಿಯಲ್ಸ್, 34 ಕಿ.ಮೀ. ಸ್ಟೋನ್, ದೆಹಲಿ ಮಥುರಾ ರಸ್ತೆ, (ಎನ್‌ಎಚ್ -2), ಬಲ್ಲಬ್‌ಗಢ, ಹರಿಯಾಣ – 121004.

ಪ್ರಮುಖ ದಿನಾಂಕಗಳು: 
ಆಫ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 19-05-2026.
ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-06-2026.

ಪ್ರಮುಖ ಲಿಂಕ್‌ಗಳು: 
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: ncbindia.com

NIELIT ನಲ್ಲಿ 75 ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಆಫ್‌ಲೈನ್ ಅರ್ಜಿ ಆಹ್ವಾನ

ರೈಲ್‌ಟೆಲ್ ನೇಮಕಾತಿ 2026


Leave a Comment