ಕರ್ನಾಟಕ ಹೈಕೋರ್ಟ್‌ನಲ್ಲಿ 101 ಗ್ರೂಪ್-ಡಿ ಹುದ್ದೆಗಳ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಅವಕಾಶ

ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನತೆಗೆ ಕರ್ನಾಟಕ ಉಚ್ಚ ನ್ಯಾಯಾಲಯ (High Court of Karnataka) ಭರ್ಜರಿ ಸಿಹಿಸುದ್ದಿ ನೀಡಿದೆ. ತನ್ನ ಕಚೇರಿಯಲ್ಲಿ ಖಾಲಿ ಇರುವ ಒಟ್ಟು 101 ‘ಗ್ರೂಪ್-ಡಿ’ (Group-D) ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 19,900 ರೂ. ಗಳಿಂದ ಆರಂಭವಾಗಿ 69,100 ರೂ. ಗಳವರೆಗೆ ಆಕರ್ಷಕ ವೇತನ ಶ್ರೇಣಿಯಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ (judiciary.karnataka.gov.in) ಮೂಲಕ ಏಪ್ರಿಲ್ 22, 2026 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಮೇ 21, 2026 ಕೊನೆಯ ದಿನಾಂಕವಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಉಚ್ಚ ನ್ಯಾಯಾಲಯ (High Court of Karnataka)
  • ಹುದ್ದೆಯ ಹೆಸರು: ಗ್ರೂಪ್-ಡಿ ಹುದ್ದೆಗಳು
  • ವೇತನ ಶ್ರೇಣಿ: 19,900 ರೂ. – 69,100 ರೂ.
  • ಒಟ್ಟು ಹುದ್ದೆಗಳ ಸಂಖ್ಯೆ: 101
  • ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ: ಈ ನೇಮಕಾತಿಯು ಎರಡು ಭಾಗಗಳನ್ನು ಒಳಗೊಂಡಿದೆ. ಉಳಿಕೆ ಮೂಲ ವೃಂದ (RPC) ದಲ್ಲಿ 93 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ (HK/KKR) ಪ್ರದೇಶದಲ್ಲಿ 8 ಹುದ್ದೆಗಳು ಖಾಲಿ ಇವೆ:

  • ಜವಾನ (Peon), ಕಾವಲುಗಾರ (Watchman), ಸ್ವೀಪರ್, ಜವಾನ-ಹೌಸ್ ಕೀಪಿಂಗ್ (RPC: 85, KKR: 08) – ಒಟ್ಟು: 93 ಹುದ್ದೆಗಳು.
  • ಲಿಫ್ಟ್ ಅಟೆಂಡರ್ (Lift Attender): 05 ಹುದ್ದೆಗಳು
  • ಸಹಾಯಕ ಬೈಂಡರ್ (Assistant Binder): 01 ಹುದ್ದೆ
  • ದರ್ಜಿ (Tailor): 01 ಹುದ್ದೆ
  • ಧೋಬಿ (Dhobi): 01 ಹುದ್ದೆ

ಶೈಕ್ಷಣಿಕ ಅರ್ಹತೆ & ಅನುಭವ: ಎಲ್ಲಾ ಹುದ್ದೆಗಳಿಗೂ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಇದರ ಜೊತೆಗೆ ಈ ಕೆಳಗಿನ ಹುದ್ದೆಗಳಿಗೆ ಸಂಬಂಧಿತ ವೃತ್ತಿ ಅನುಭವ ಅಗತ್ಯವಿದೆ:

  • ಲಿಫ್ಟ್ ಅಟೆಂಡರ್: ಲಿಫ್ಟ್ ಮೆಕ್ಯಾನಿಸಂನಲ್ಲಿ ಅನುಭವ ಇರಬೇಕು.
  • ಸಹಾಯಕ ಬೈಂಡರ್: ಬೈಂಡಿಂಗ್ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವವಿರಬೇಕು.
  • ದರ್ಜಿ: ಟೈಲರಿಂಗ್ ಕೆಲಸದಲ್ಲಿ ಕನಿಷ್ಠ 3 ವರ್ಷಗಳ ಅನುಭವವಿರಬೇಕು.
  • ಧೋಬಿ: ಧೋಬಿಯಾಗಿ ಕೆಲಸ ಮಾಡಿದ ಅನುಭವವಿರಬೇಕು.

ವೇತನ ಶ್ರೇಣಿ:

  • ಜವಾನ, ಕಾವಲುಗಾರ, ಸ್ವೀಪರ್, ಹೌಸ್ ಕೀಪಿಂಗ್, ಸಹಾಯಕ ಬೈಂಡರ್, ಧೋಬಿ: ಮಾಸಿಕ 19,900 ರೂ. – 63,200 ರೂ. ವರೆಗೆ (ಪೇ-ಲೆವೆಲ್ 2).
  • ಲಿಫ್ಟ್ ಅಟೆಂಡರ್ ಮತ್ತು ದರ್ಜಿ: ಮಾಸಿಕ 21,700 ರೂ. – 69,100 ರೂ. ವರೆಗೆ (ಪೇ-ಲೆವೆಲ್ 3).

ವಯೋಮಿತಿ: 

  • ಕನಿಷ್ಠ ವಯಸ್ಸು: 18 ವರ್ಷ (ಎಲ್ಲಾ ವರ್ಗದವರಿಗೂ)
  • ಗರಿಷ್ಠ ವಯಸ್ಸು:
    • ಸಾಮಾನ್ಯ ವರ್ಗದ (General Merit) ಅಭ್ಯರ್ಥಿಗಳಿಗೆ: 40 ವರ್ಷ
    • ಪ್ರವರ್ಗ-2A, 2B, 3A, 3B (OBC) ಅಭ್ಯರ್ಥಿಗಳಿಗೆ: 43 ವರ್ಷ
    • ಪ.ಜಾತಿ (SC), ಪ.ಪಂಗಡ (ST) ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ: 45 ವರ್ಷ (ಸರ್ಕಾರದ ಆದೇಶದನ್ವಯ ಎಲ್ಲಾ ಪ್ರವರ್ಗಗಳಿಗೂ ಒಮ್ಮೆ ಮಾತ್ರ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಿ ಮೇಲಿನ ವಯಸ್ಸನ್ನು ನಿಗದಿಪಡಿಸಲಾಗಿದೆ).

ಅರ್ಜಿ ಶುಲ್ಕ:

  • ಸಾಮಾನ್ಯ (GM), 2A, 2B, 3A, 3B ಅಭ್ಯರ್ಥಿಗಳಿಗೆ: ರೂ. 200/-
  • SC, ST, ಪ್ರವರ್ಗ-1 ಹಾಗೂ ಅಂಗವಿಕಲ (PwBD) ಅಭ್ಯರ್ಥಿಗಳಿಗೆ: ರೂ. 100/-
  • ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-04-2026
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-05-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21-05-2026

ಪ್ರಮುಖ ಲಿಂಕ್‌ಗಳು:

SSC ಸ್ಟೆನೋಗ್ರಾಫರ್ ನೇಮಕಾತಿ 2026

Leave a Comment