ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವು (KSMHA) ಖಾಲಿ ಇರುವ ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಪ್ರಾಧಿಕಾರದ ಅಡಿಯಲ್ಲಿ ‘ಕಾರ್ಯಕ್ರಮ ಸಲಹೆಗಾರ’ (Programme Consultant) ಹುದ್ದೆಗೆ ನೇರ ಸಂದರ್ಶನ (Walk-in Interview) ಏರ್ಪಡಿಸಲಾಗಿದೆ.
ಈ ಹುದ್ದೆಯು ಸಂಪೂರ್ಣವಾಗಿ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತವಾಗಿದೆ (Contract Basis). ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 1,10,000 ರೂ.ಗಳ ವೇತನ ನೀಡಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ (MD) ಹೊಂದಿರುವ, ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಮೇ 12, 2026 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ (KSMHA)
- ಹುದ್ದೆಯ ಹೆಸರು: ಕಾರ್ಯಕ್ರಮ ಸಲಹೆಗಾರ (Programme Consultant)
- ವೇತನ ಶ್ರೇಣಿ: ಮಾಸಿಕ ರೂ. 1,10,000 ರೂ.
- ಹುದ್ದೆಗಳ ಸಂಖ್ಯೆ: 01
- ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ & ಅನುಭವ :
- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಾವಧಿಯ (Full time course) ಎಂ.ಡಿ. ಸೈಕಿಯಾಟ್ರಿ (MD Psychiatry) ಅಥವಾ ಡಿ.ಪಿ.ಎಂ (DPM in Psychiatry) ಅಥವಾ ಡಿ.ಎನ್.ಬಿ (DNB in Psychiatry) ಅಥವಾ ಕಮ್ಯುನಿಟಿ ಮೆಡಿಸಿನ್ನಲ್ಲಿ ಎಂ.ಡಿ (MD in Community Medicine) ಪೂರ್ಣಗೊಳಿಸಿರಬೇಕು.
- ಅನುಭವ: ಕನಿಷ್ಠ 03 ವರ್ಷಗಳ ಕಾರ್ಯಾನುಭವ ಕಡ್ಡಾಯ. ಮಾನಸಿಕ ಆರೋಗ್ಯ ಅಥವಾ ಇತರ ಯಾವುದೇ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ 3 ವರ್ಷಗಳ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ಇತರೆ ಕೌಶಲ್ಯಗಳು:
- ಅಭ್ಯರ್ಥಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಸ್ಪಷ್ಟವಾಗಿ ತಿಳಿದಿರಬೇಕು.
- ಕಂಪ್ಯೂಟರ್ ಜ್ಞಾನ ಅಂದರೆ MS Word, Excel ಮತ್ತು Power point ನ ಬಳಕೆಯು ತಿಳಿದಿರಬೇಕು.
ವಯೋಮಿತಿ:
- ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ನೇರ ಸಂದರ್ಶನ).
ಆಯ್ಕೆ ವಿಧಾನ:
- ವಾಕ್-ಇನ್ ಸಂದರ್ಶನ (Walk-in Interview): ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 19-04-2026
- ವಾಕ್-ಇನ್-ಇಂಟರ್ವ್ಯೂ ದಿನಾಂಕ: 12-05-2026
- ಸಮಯ: ಬೆಳಿಗ್ಗೆ 11:00 ಗಂಟೆಗೆ
ಸಂದರ್ಶನಕ್ಕೆ ಹಾಜರಾಗುವ ವಿಧಾನ:
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಇತ್ತೀಚಿನ CV (ಬಯೋ-ಡೇಟಾ), ಒಂದು ಪಾಸ್ಪೋರ್ಟ್ ಅಳತೆಯ ಫೋಟೋ ಹಾಗೂ ಮಾನ್ಯವಾದ ಗುರುತಿನ ಚೀಟಿಯೊಂದಿಗೆ (ಆಧಾರ್ ಕಾರ್ಡ್/ ಪ್ಯಾನ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ವೋಟರ್ ಐಡಿ) ಸಂದರ್ಶನಕ್ಕೆ ಹಾಜರಾಗಬೇಕು.
- ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಅನುಭವವನ್ನು ಸಾಬೀತುಪಡಿಸುವ ಎಲ್ಲಾ ಮೂಲ ದಾಖಲಾತಿಗಳನ್ನು (Original Documents) ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು (Self-attested) ಕಡ್ಡಾಯವಾಗಿ ತರಬೇಕು.
- ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ (TA/DA) ನೀಡಲಾಗುವುದಿಲ್ಲ.
- ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲಿ 080-29559040 ಸಂಖ್ಯೆಗೆ ಕರೆ ಮಾಡಬಹುದು.
ಸಂದರ್ಶನ ನಡೆಯುವ ಸ್ಥಳ: ನಿರ್ದೇಶಕರ ಕಚೇರಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಮತ್ತು ಸದಸ್ಯ ಕಾರ್ಯದರ್ಶಿ, ಕೆ.ಎಸ್.ಎಂ.ಹೆಚ್.ಎ (KSMHA), 6ನೇ ಮಹಡಿ, ಆರೋಗ್ಯ ಸೌಧ, ಮಾಗಡಿ 1ನೇ ಕ್ರಾಸ್, ಬೆಂಗಳೂರು – 560023.
ಪ್ರಮುಖ ಲಿಂಕ್ಗಳು:
- ಅಧಿಕೃತ ಅಧಿಸೂಚನೆ ಪಿಡಿಎಫ್: ಡೌನ್ಲೋಡ್
- ಅಧಿಕೃತ ವೆಬ್ಸೈಟ್: hfwcom.karnataka.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ