ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಮಿನಿ ರತ್ನ ಸಂಸ್ಥೆಯಾದ HLL ಲೈಫ್‌ಕೇರ್ ಲಿಮಿಟೆಡ್ (HLL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ (Hindlabs, Bhopal ಮತ್ತು BMHRC) ಯೋಜನೆಗಳಿಗಾಗಿ ಫಿಕ್ಸೆಡ್-ಟರ್ಮ್ ಕಾಂಟ್ರಾಕ್ಟ್ (Fixed-Term Contract) ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.
ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ರೇಡಿಯೋಗ್ರಾಫರ್ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 22, 2026 ರಂದು ಭೋಪಾಲ್‌ನಲ್ಲಿ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ (ನೇರ ಸಂದರ್ಶನ) ಹಾಜರಾಗಬಹುದು.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: HLL ಲೈಫ್‌ಕೇರ್ ಲಿಮಿಟೆಡ್ (HLL Lifecare Limited)
- ಹುದ್ದೆಯ ಹೆಸರು: ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ರೇಡಿಯೋಗ್ರಾಫರ್ ಇತ್ಯಾದಿ
- ವೇತನ ಶ್ರೇಣಿ: ಮಾಸಿಕ 10,000 ರೂ. ದಿಂದ 32,500 ರೂ.
- ಉದ್ಯೋಗ ಸ್ಥಳ: ಭೋಪಾಲ್ – ಮಧ್ಯಪ್ರದೇಶ
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ & ಅನುಭವ:
- ಹಿರಿಯ ರೇಡಿಯೋಗ್ರಾಫರ್ (ಕಮ್ ಸೆಂಟರ್ ಮ್ಯಾನೇಜರ್): DRT / DMIT / BSc (Radiology) / BRIT / BSc (MIT) / MSc (MIT) / MSc (Radiology) / MRIT / ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. DRT ಆದವರಿಗೆ 7 ವರ್ಷ, BSc ಆದವರಿಗೆ 6 ವರ್ಷ, MSc/PG ಆದವರಿಗೆ 5 ವರ್ಷಗಳ ಅನುಭವ ಕಡ್ಡಾಯ.
- ರೇಡಿಯೋಗ್ರಾಫರ್ (ಕಮ್ RSO) & ರೇಡಿಯೋಗ್ರಾಫರ್: DRT / DRRT / BSc (RT) / BSc (Radiography) / BMIT / BMRT ಪೂರ್ಣಗೊಳಿಸಿರಬೇಕು. X-ray / CT / MRI ವಿಭಾಗದಲ್ಲಿ ಕನಿಷ್ಠ 2 ವರ್ಷಗಳ ಅನುಭವವಿರಬೇಕು.
- ಸ್ಟಾಫ್ ನರ್ಸ್: BSc Nursing ಅಥವಾ GNM ಪೂರ್ಣಗೊಳಿಸಿರಬೇಕು. BSc ಆದವರಿಗೆ 1 ವರ್ಷ ಹಾಗೂ GNM ಆದವರಿಗೆ 3 ವರ್ಷಗಳ ಅನುಭವ ಕಡ್ಡಾಯ.
- ಹಿರಿಯ ಪ್ರಯೋಗಾಲಯ ತಂತ್ರಜ್ಞ (Senior Lab Technician): DMLT / BSC (MLT) / MSC (MLT) ಮುಗಿಸಿರಬೇಕು. ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ DMLT ಆದವರಿಗೆ 8 ವರ್ಷ, BSC ಆದವರಿಗೆ 7 ವರ್ಷ, MSC ಆದವರಿಗೆ 5 ವರ್ಷಗಳ ಅನುಭವ ಅಗತ್ಯ.
- ಪ್ರಯೋಗಾಲಯ ತಂತ್ರಜ್ಞ (Lab Technician): DMLT ಅಥವಾ BSC (MLT) ಮುಗಿಸಿರಬೇಕು. DMLT ಗೆ 4 ವರ್ಷ ಹಾಗೂ BSC ಗೆ 3 ವರ್ಷಗಳ ಅನುಭವ ಕಡ್ಡಾಯ.
- ಜೂನಿಯರ್ ಲ್ಯಾಬ್ ತಂತ್ರಜ್ಞ: DMLT ಅಥವಾ BSC (MLT) ಪಾಸ್ ಆಗಿರಬೇಕು. DMLT ಗೆ 2 ವರ್ಷ ಹಾಗೂ BSC ಗೆ 1 ವರ್ಷದ ಅನುಭವ ಅಗತ್ಯ.
ವೇತನ ಶ್ರೇಣಿ:
- ಹಿರಿಯ ರೇಡಿಯೋಗ್ರಾಫರ್: ರೂ. 14,000 – 32,500/-
- ರೇಡಿಯೋಗ್ರಾಫರ್ (RSO): ರೂ. 11,500 – 23,000/-
- ರೇಡಿಯೋಗ್ರಾಫರ್: ರೂ. 10,500 – 21,000/-
- ಸ್ಟಾಫ್ ನರ್ಸ್: ರೂ. 10,000 – 20,000/-
- ಹಿರಿಯ ಪ್ರಯೋಗಾಲಯ ತಂತ್ರಜ್ಞ: ರೂ. 14,000 – 32,500/-
- ಪ್ರಯೋಗಾಲಯ ತಂತ್ರಜ್ಞ: ರೂ. 11,500 – 23,000/-
- ಜೂನಿಯರ್ ಲ್ಯಾಬ್ ತಂತ್ರಜ್ಞ: ರೂ. 10,000 – 20,000/-
ವಯೋಮಿತಿ:
- ಅಭ್ಯರ್ಥಿಯ ಗರಿಷ್ಠ ವಯಸ್ಸು 01-04-2026 ಕ್ಕೆ ಅನ್ವಯವಾಗುವಂತೆ 37 ವರ್ಷಗಳು ಮೀರಿರಬಾರದು.
- ವಯೋಮಿತಿ ಸಡಿಲಿಕೆ: ಭಾರತ ಸರ್ಕಾರದ ನಿಯಮಗಳ ಪ್ರಕಾರ SC/ST/OBC/PwD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 15-04-2026
- ವಾಕ್-ಇನ್ ದಿನಾಂಕ: 22-ಏಪ್ರಿಲ್-2026
ಸಂದರ್ಶನಕ್ಕೆ ಹಾಜರಾಗುವ ವಿಧಾನ:
- ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲಾತಿಗಳನ್ನು ಮತ್ತು ಸ್ವಯಂ-ದೃಢೀಕರಿಸಿದ (Self-attested) ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.
- ತರಬೇಕಾದ ದಾಖಲೆಗಳು: ವಯಸ್ಸಿನ ಪುರಾವೆ, ಶೈಕ್ಷಣಿಕ ಅಂಕಪಟ್ಟಿಗಳು, ಅನುಭವ ಪ್ರಮಾಣಪತ್ರ, ಇತ್ತೀಚಿನ ಸಂಬಳದ ಪ್ರಮಾಣಪತ್ರ (break-up ನೊಂದಿಗೆ), ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ, ಹಾಗೂ ಜಾತಿ ಪ್ರಮಾಣಪತ್ರ (SC/ST/OBC).
- ಸಂದರ್ಶನ ನಡೆಯುವ ಸ್ಥಳ: Kwality’s Motel Shiraz No.7, Service Rd, Board Office Square, No 6 Locality, Shivaji Nagar, Bhopal – 462011, Madhya Pradesh.
ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ: ಡೌನ್‌ಲೋಡ್
- ಅಧಿಕೃತ ವೆಬ್‌ಸೈಟ್: lifecarehll.com
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ