ದೇಶದ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಾಗಿರುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು’ (IIMB) ಖಾಲಿ ಇರುವ ಬೋಧಕೇತರ ಹುದ್ದೆಯ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಸಂಸ್ಥೆಯ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ (PGP) ವಿಭಾಗದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ನಿರ್ವಹಿಸಲು ‘ಮ್ಯಾನೇಜರ್’ (Manager) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಯು ಗುತ್ತಿಗೆ ಆಧಾರಿತವಾಗಿದ್ದು (Contractual), ಆಸಕ್ತ ಹಾಗೂ 10 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಅಭ್ಯರ್ಥಿಗಳು ಮೇ 24, 2026 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (IIMB).
- ಹುದ್ದೆಯ ಹೆಸರು: ಮ್ಯಾನೇಜರ್
- ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
- ಕಡ್ಡಾಯ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು (Graduate degree) ಪೂರ್ಣಗೊಳಿಸಿರಬೇಕು.
- ಅಪೇಕ್ಷಿತ ಅರ್ಹತೆ: ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ (MBA ಅಥವಾ ತತ್ಸಮಾನ) ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
- ಕಾರ್ಯಾನುಭವ: ಬೃಹತ್ ಸಂಸ್ಥೆಗಳು / ಸಾರ್ವಜನಿಕ ವಲಯದ ಉದ್ದಿಮೆಗಳು (PSUs) / ಸರ್ಕಾರಿ ಸಂಸ್ಥೆಗಳು ಅಥವಾ ಪ್ರಧಾನ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಿದ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು.
- ಭಾಷಾ ಜ್ಞಾನ: ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕು. ಜೊತೆಗೆ ಹಿಂದಿ ಮತ್ತು ಕನ್ನಡ ಭಾಷಾ ಜ್ಞಾನವಿದ್ದರೆ ಹಾಗೂ ವಿದೇಶಿ ಭಾಷೆ ತಿಳಿದಿದ್ದರೆ ಹೆಚ್ಚುವರಿ ಆದ್ಯತೆ ಸಿಗಲಿದೆ.
ಪ್ರಮುಖ ದಿನಾಂಕಗಳು:
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 17-04-2026
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-05-2026
ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಅಭ್ಯರ್ಥಿಗಳು IIMB ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಲಿಂಕ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
- ಆನ್ಲೈನ್ ಅರ್ಜಿಯಲ್ಲಿ ಕೇಳಲಾದ ಎಲ್ಲಾ ಕಡ್ಡಾಯ ಮಾಹಿತಿಗಳನ್ನು (Mandatory fields) ತಪ್ಪದೇ ಭರ್ತಿ ಮಾಡಬೇಕು.
- ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು (ದಾಖಲೆಗಳಿಲ್ಲದ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ):
- 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು.
- ಡಿಪ್ಲೊಮಾ / ಪದವಿಯ ಎಲ್ಲಾ ಸೆಮಿಸ್ಟರ್ಗಳ ಅಂಕಪಟ್ಟಿಗಳು ಮತ್ತು ಅಂತಿಮ ಪದವಿ ಪ್ರಮಾಣಪತ್ರ.
- ಸ್ನಾತಕೋತ್ತರ ಪದವಿಯ (ಅನ್ವಯಿಸಿದರೆ) ಎಲ್ಲಾ ಅಂಕಪಟ್ಟಿಗಳು ಹಾಗೂ ಪ್ರಮಾಣಪತ್ರ.
- ಎಲ್ಲಾ ಅನುಭವದ ಪತ್ರಗಳು (All experience letters).
- ಇತ್ತೀಚಿನ 3 ತಿಂಗಳ ಪೇ-ಸ್ಲಿಪ್ (Payslips) ಅಥವಾ 3 ತಿಂಗಳ ಆದಾಯದ ಪುರಾವೆ.
- ಯಾವುದಾದರೂ ವೃತ್ತಿಪರ ತರಬೇತಿ ಪಡೆದಿದ್ದರೆ, ಅದರ ಪ್ರಮಾಣಪತ್ರ.
ಪ್ರಮುಖ ಲಿಂಕ್ಗಳು:
- ಅಧಿಕೃತ ಅಧಿಸೂಚನೆ : ಡೌನ್ಲೋಡ್
- ಆನ್ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ಸೈಟ್: iimb.ac.ingov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ