ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಘವು (KSRLPS) ಗ್ರಾಮೀಣ ಸಮುದಾಯಗಳ ಸಬಲೀಕರಣಕ್ಕಾಗಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಕ್ಲಸ್ಟರ್ ಮೇಲ್ವಿಚಾರಕರು ಹಾಗೂ DEO/MIS ಸಂಯೋಜಕ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಇಚ್ಛಿಸುವವರು ಮೇ 31, 2026 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಘ (KSRLPS)
- ಒಟ್ಟು ಹುದ್ದೆಗಳ ಸಂಖ್ಯೆ: 05
- ಉದ್ಯೋಗ ಸ್ಥಳ: ವಿಜಯನಗರ
ಹುದ್ದೆಗಳ ವಿವರ:
- ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು – 1 ಹುದ್ದೆ
- ಕ್ಲಸ್ಟರ್ ಮೇಲ್ವಿಚಾರಕರು – 3 ಹುದ್ದೆಗಳು
- ಡಿಇಒ / ಎಂಐಎಸ್ ಸಂಯೋಜಕರು – 1 ಹುದ್ದೆ
ವೇತನ ಶ್ರೇಣಿಯ ವಿವರ:
- ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು – ನಿಯಮಗಳ ಪ್ರಕಾರ
- ಕ್ಲಸ್ಟರ್ ಮೇಲ್ವಿಚಾರಕರು – ರೂ. 18,000/- ಮಾಸಿಕ
- ಡಿಇಒ / ಎಂಐಎಸ್ ಸಂಯೋಜಕರು – ರೂ. 20,500/- ಮಾಸಿಕ
ಶೈಕ್ಷಣಿಕ ಅರ್ಹತೆ:
- ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು ಮೀರಿರಬಾರದು.
- ಸರ್ಕಾರಿ ಹಾಗೂ KSRLPS ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
- ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
- ಸ್ವೀಕರಿಸಿದ ಅರ್ಜಿಗಳ ಶಾರ್ಟ್‌ಲಿಸ್ಟಿಂಗ್, ದಾಖಲಾತಿ ಪರಿಶೀಲನೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು ಮೊದಲಿಗೆ KSRLPS ನ ಅಧಿಕೃತ ಜಾಬ್ ಪೋರ್ಟಲ್ (jobsksrlps.karnataka.gov.in) ಗೆ ಭೇಟಿ ನೀಡಬೇಕು.
- ಲಾಗಿನ್ ಆಗುವ ಮೊದಲು ಪೋರ್ಟಲ್‌ನಲ್ಲಿ ರಿಜಿಸ್ಟರ್ (Register) ಮಾಡಿಕೊಳ್ಳಿ.
- ನಿಮ್ಮ ವಿದ್ಯಾರ್ಹತೆಗೆ ಸೂಕ್ತವಾದ ಹುದ್ದೆಯನ್ನು ಆಯ್ಕೆ ಮಾಡಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
- ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿ, ವಯಸ್ಸಿನ ಪುರಾವೆ, ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ರೆಸ್ಯೂಮ್ (Resume) ಅನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡು ಅಂತಿಮವಾಗಿ ಅರ್ಜಿಯನ್ನು ಸಬ್‌ಮಿಟ್ ಮಾಡಿ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 12-05-2026.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2026.
ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: jobsksrlps.karnataka.gov.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ
Indian Army Recruitment 2026: ವೇತನ 56,100 ರೂ. ಅರ್ಹರು ಅರ್ಜಿ ಸಲ್ಲಿಸಿ