ಮಂಗಳೂರಿನ ಸೂರತ್ಕಲ್‌ನಲ್ಲಿರುವ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾದ ‘ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ’ (NIT) ತನ್ನ 14 ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ (Faculty positions) ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.
ಸಹಾಯಕ ಪ್ರಾಧ್ಯಾಪಕ (Assistant Professor), ಅಸೋಸಿಯೇಟ್ ಪ್ರೊಫೆಸರ್ (Associate Professor) ಮತ್ತು ಪ್ರಾಧ್ಯಾಪಕ (Professor) ಹುದ್ದೆಗಳು ಸೇರಿದಂತೆ ಒಟ್ಟು 84 ಹುದ್ದೆಗಳಿಗೆ ಅರ್ಹ ಭಾರತೀಯ ನಾಗರಿಕರು ಹಾಗೂ OCI (Overseas Citizen of India) ಕಾರ್ಡ್ ಹೊಂದಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 02, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ, ಸೂರತ್ಕಲ್ (NIT)
- ಹುದ್ದೆಯ ಹೆಸರು: ಫ್ಯಾಕಲ್ಟಿ ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ: 84 ಹುದ್ದೆಗಳು.
- ಉದ್ಯೋಗ ಸ್ಥಳ: ದಕ್ಷಿಣ ಕನ್ನಡ
ಹುದ್ದೆಗಳ ವಿವರ:
| ಸಹಾಯಕ ಪ್ರಾಧ್ಯಾಪಕರು | 82 |
| ಅಸೋಸಿಯೇಟ್ ಪ್ರೊಫೆಸರ್ | 1 |
| ಪ್ರಾಧ್ಯಾಪಕರು | 1 |
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಯುಜಿ ಮತ್ತು ಪಿಜಿ (UG & PG) ಹಂತದಲ್ಲಿ ಪ್ರಥಮ ದರ್ಜೆಯೊಂದಿಗೆ (ಕನಿಷ್ಠ 60% ಅಂಕ ಅಥವಾ 6.5 CGPA) ತೇರ್ಗಡೆಯಾಗಿರಬೇಕು.
- ಇದರ ಜೊತೆಗೆ ಆಯಾ ವಿಭಾಗಗಳಿಗೆ ಸಂಬಂಧಿಸಿದ ವಿಷಯದಲ್ಲಿ ಕಡ್ಡಾಯವಾಗಿ ಪಿಎಚ್‌ಡಿ (Ph.D) ಪದವಿಯನ್ನು ಪೂರ್ಣಗೊಳಿಸಿರಬೇಕು.
- (ಸೂಚನೆ: ಪ್ರತಿಷ್ಠಿತ ಸಂಸ್ಥೆಗಳಿಂದ ಯುಜಿ ಪದವಿಯ ನಂತರ ನೇರವಾಗಿ ಪಿಎಚ್‌ಡಿ ಮುಗಿಸಿದವರನ್ನೂ ಪರಿಗಣಿಸಲಾಗುವುದು) .
ಅರ್ಜಿ ಶುಲ್ಕ:
- ಸಾಮಾನ್ಯ (General), ಒಬಿಸಿ (OBC) ಮತ್ತು EWS ಅಭ್ಯರ್ಥಿಗಳಿಗೆ: ರೂ. 2500/- (GST ಸೇರಿ).
- SC, ST ಹಾಗೂ ಅಂಗವಿಕಲ (PwD) ಅಭ್ಯರ್ಥಿಗಳಿಗೆ: ರೂ. 1250/- (GST ಸೇರಿ).
- ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
- ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಟೀಚಿಂಗ್ ಮತ್ತು ರಿಸರ್ಚ್ ಪ್ರೆಸೆಂಟೇಶನ್ (Teaching and research presentations) ಗೆ ಆಹ್ವಾನಿಸಲಾಗುತ್ತದೆ.
- ತದನಂತರ ಆಯ್ಕೆ ಸಮಿತಿಯಿಂದ ವೈಯಕ್ತಿಕ ಸಂದರ್ಶನವನ್ನು (Personal interview) ನಡೆಸಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 04-05-2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-06-2026
ಅರ್ಜಿ ಸಲ್ಲಿಸುವ ವಿಧಾನ:
- ಆಸಕ್ತ ಅಭ್ಯರ್ಥಿಗಳು NITK ಅಧಿಕೃತ ವೆಬ್‌ಸೈಟ್ (www.nitk.ac.in) ಗೆ ಭೇಟಿ ನೀಡಿ ರಿಕ್ರೂಟ್‌ಮೆಂಟ್ ಪೋರ್ಟಲ್‌ನಲ್ಲಿ ರಿಜಿಸ್ಟರ್ ಆಗಬೇಕು.
- ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಐಡಿ ಪ್ರೂಫ್, ವಯಸ್ಸಿನ ಪುರಾವೆ, ಎಲ್ಲಾ ಅಂಕಪಟ್ಟಿಗಳು, ಪಿಎಚ್‌ಡಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಹಾಗೂ ಅನುಭವ ಮತ್ತು ಸಂಶೋಧನಾ ಪ್ರಕಟಣೆಗಳ (Publications) ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ‘ಅಟೆಸ್ಟೇಶನ್ ಫಾರ್ಮ್’ (Attestation Form) ಅನ್ನು ಡೌನ್‌ಲೋಡ್ ಮಾಡಿ, ಕೈಯಾರೆ ಭರ್ತಿ ಮಾಡಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯ.
- ಅರ್ಜಿ ಶುಲ್ಕವನ್ನು ಪಾವತಿಸಿ ಆನ್‌ಲೈನ್ ಮೂಲಕ ಅರ್ಜಿಯನ್ನು ‘Submit’ ಮಾಡಿ.
ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ: ಡೌನ್‌ಲೋಡ್
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: Apply ಮಾಡಿ
- ಅಧಿಕೃತ ವೆಬ್‌ಸೈಟ್: www.nitk.ac.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ