ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಯಾದ ‘ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (RailTel) ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಪ್ರಕಟಿಸಿದೆ.
ದಕ್ಷಿಣ ವಲಯದ KSWAN ಪ್ರಾಜೆಕ್ಟ್‌ಗಾಗಿ (KSWAN PROJECT OF RAILTEL IN SOUTHERN REGION) ಅನುಭವಿ ತಾಂತ್ರಿಕ ಸಿಬ್ಬಂದಿಯನ್ನು 5 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.
ಎಂಜಿನಿಯರಿಂಗ್, ಐಟಿಐ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಮೇ 30, 2026 ರೊಳಗೆ ಆಫ್‌ಲೈನ್ (ಅಂಚೆ) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (RailTel).
- ಪ್ರಾಜೆಕ್ಟ್ ಹೆಸರು: KSWAN ಪ್ರಾಜೆಕ್ಟ್.
- ಒಟ್ಟು ಹುದ್ದೆಗಳ ಸಂಖ್ಯೆ: 53.
- ವೇತನ ಶ್ರೇಣಿ: ವಾರ್ಷಿಕ ರೂ. 4,14,301 – 17,32,810 ರೂ.
- ಉದ್ಯೋಗ ಸ್ಥಳ: ಕರ್ನಾಟಕ
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
- ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ITI / ಡಿಪ್ಲೊಮಾ / B.Sc / BCA / BE / B.Tech / MCA / M.Sc / M.E / M.Tech ಪೂರ್ಣಗೊಳಿಸಿರಬೇಕು.
- ಅನುಭವ: ಕನಿಷ್ಠ 3 ವರ್ಷಗಳಿಂದ ಗರಿಷ್ಠ 15 ವರ್ಷಗಳವರೆಗೆ ಸಂಬಂಧಿತ ತಾಂತ್ರಿಕ ಕ್ಷೇತ್ರದಲ್ಲಿ (IT infrastructure, networking, server management ಇತ್ಯಾದಿ) ಕಡ್ಡಾಯವಾಗಿ ಕಾರ್ಯಾನುಭವ ಹೊಂದಿರಬೇಕು.
ರೈಲ್‌ಟೆಲ್ ಹುದ್ದೆಗಳ ವಿವರ:
- ಪ್ರಾಜೆಕ್ಟ್ ಡೈರೆಕ್ಟರ್ – 1 ಹುದ್ದೆ
- ಪ್ರಾಜೆಕ್ಟ್ ಮ್ಯಾನೇಜರ್ – 1 ಹುದ್ದೆ
- ನೆಟ್‌ವರ್ಕ್ ಸ್ಪೆಷಲಿಸ್ಟ್ / ಅಡ್ಮಿನ್ / ಎಂಜಿನಿಯರ್ – 8 ಹುದ್ದೆಗಳು
- ಸೆಕ್ಯುರಿಟಿ ಸ್ಪೆಷಲಿಸ್ಟ್ / ಅಡ್ಮಿನ್ – 2 ಹುದ್ದೆಗಳು
- ಸರ್ವರ್ ಅಡ್ಮಿನ್ 1 & 2 -2 ಹುದ್ದೆಗಳು
- ಸೆಂಟ್ರಲ್ ಹೆಲ್ಪ್‌ಡೆಸ್ಕ್ L1, L2: 5 ಹುದ್ದೆಗಳು
- ಫೀಲ್ಡ್ ಎಂಜಿನಿಯರ್ 1, 2, 3 – 3 ಹುದ್ದೆಗಳು
- ಎಲೆಕ್ಟ್ರಿಕಲ್ ಟೆಕ್ನಿಷಿಯನ್ – 1 ಹುದ್ದೆ
- ನೋಡಲ್ ಆಫೀಸರ್ – 30 ಹುದ್ದೆಗಳು
ವಾರ್ಷಿಕ ವೇತನ ಶ್ರೇಣಿಯ ವಿವರ:
- ಪ್ರಾಜೆಕ್ಟ್ ಡೈರೆಕ್ಟರ್ – ವಾರ್ಷಿಕ ರೂ. 17,32,810/-
- ಪ್ರಾಜೆಕ್ಟ್ ಮ್ಯಾನೇಜರ್ – ವಾರ್ಷಿಕ ರೂ. 13,10,400/-
- ನೆಟ್‌ವರ್ಕ್ ಸ್ಪೆಷಲಿಸ್ಟ್ / ಅಡ್ಮಿನ್ / ಎಂಜಿನಿಯರ್: ವಾರ್ಷಿಕ ರೂ. 4,55,465 ದಿಂದ ರೂ. 14,47,614/- ರವರೆಗೆ (ಹುದ್ದೆಯ ಹಂತಕ್ಕೆ ಅನುಗುಣವಾಗಿ)
- ಸೆಕ್ಯುರಿಟಿ ಸ್ಪೆಷಲಿಸ್ಟ್ / ಅಡ್ಮಿನ್: ವಾರ್ಷಿಕ ರೂ. 12,57,027 ಮತ್ತು ರೂ. 13,36,795/-
- ಸರ್ವರ್ ಅಡ್ಮಿನ್ 1 & 2: ವಾರ್ಷಿಕ ರೂ. 10,51,445 ಮತ್ತು ರೂ. 10,79,165/-
- ಸೆಂಟ್ರಲ್ ಹೆಲ್ಪ್‌ಡೆಸ್ಕ್ L1 & L2: ವಾರ್ಷಿಕ ರೂ. 3,68,400 ದಿಂದ ರೂ. 5,95,450/- ರವರೆಗೆ
- ಫೀಲ್ಡ್ ಎಂಜಿನಿಯರ್ 1, 2 & 3: ವಾರ್ಷಿಕ ರೂ. 4,62,686 ದಿಂದ ರೂ. 5,71,385/- ರವರೆಗೆ
- ಎಲೆಕ್ಟ್ರಿಕಲ್ ಟೆಕ್ನಿಷಿಯನ್ – ವಾರ್ಷಿಕ ರೂ. 4,20,185/-
- ನೋಡಲ್ ಆಫೀಸರ್ – ವಾರ್ಷಿಕ ರೂ. 4,14,301/-
ವಯೋಮಿತಿ:
- ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 50 ವರ್ಷಗಳಾಗಿರಬೇಕು.
- ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ (PwBD) ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ (ಗರಿಷ್ಠ ವಯಸ್ಸು 55 ಮೀರುವಂತಿಲ್ಲ).
ಆಯ್ಕೆ ಪ್ರಕ್ರಿಯೆ:
- ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ನೇರ ಸಂದರ್ಶನ (Interview) ನಡೆಸಲಾಗುವುದು.
- ಸಂದರ್ಶನದಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ಪರೀಕ್ಷೆ (Medical Examination) ಇರುತ್ತದೆ.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 20-05-2026.
- ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 30-05-2026
ಅರ್ಜಿ ಸಲ್ಲಿಸುವ ವಿಧಾನ (How to Apply):
- ರೈಲ್‌ಟೆಲ್‌ನ ಅಧಿಕೃತ ವೆಬ್‌ಸೈಟ್‌ಗೆ (www.railtelindia.com) ಭೇಟಿ ನೀಡಿ, ನೇಮಕಾತಿ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು (Annexure-II) ಡೌನ್‌ಲೋಡ್ ಮಾಡಿಕೊಳ್ಳಿ.
- ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಹಾಗೂ ಪ್ರತಿ ಪುಟಕ್ಕೂ ಸಹಿ ಮಾಡಿ.
- 10ನೇ ತರಗತಿ ಅಂಕಪಟ್ಟಿ, ಶೈಕ್ಷಣಿಕ ದಾಖಲೆಗಳು, ಜಾತಿ ಪ್ರಮಾಣಪತ್ರ, ಐಡಿ ಪ್ರೂಫ್ (ಆಧಾರ್/ಪ್ಯಾನ್), ಮತ್ತು ಕಡ್ಡಾಯವಾಗಿ ನಿಮ್ಮ ಅನುಭವದ ಪ್ರಮಾಣಪತ್ರ ಅಥವಾ ಪೇ-ಸ್ಲಿಪ್‌ಗಳನ್ನು ಸ್ವಯಂ ದೃಢೀಕರಿಸಿ (Self-attest) ಅರ್ಜಿಗೆ ಲಗತ್ತಿಸಿ.
- ಲಕೋಟೆಯ ಮೇಲೆ “APPLICATION FOR TECHNICAL FOR KSWAN PROJECT OF RAILTEL IN SOUTHERN REGION ON CONTRACT BASIS” ಎಂದು ಬರೆದು, ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಿ.
- ಅರ್ಜಿ ಕಳುಹಿಸಬೇಕಾದ ವಿಳಾಸ: Territory Manager/SBC, RailTel Corporation of India Limited Territory Office, No. 6/1, 12th Main, Vasanthnagar, Opp. Mount Carmel College Gate-1 Road, BENGALURU – 560052
ಪ್ರಮುಖ ಲಿಂಕ್‌ಗಳು:
- ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಡೌನ್‌ಲೋಡ್
- ಅಧಿಕೃತ ವೆಬ್‌ಸೈಟ್: railtel.in
ಇತರೆ ಉದ್ಯೋಗ ಮಾಹಿತಿಗಳನ್ನು ಓದಿರಿ
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಉದ್ಯೋಗಾವಕಾಶ; ವೇತನ 49,500 ರೂ.
ಐಐಟಿ ಧಾರವಾಡದಲ್ಲಿ ಉದ್ಯೋಗ: ಲೈಬ್ರರಿ ಟ್ರೈನಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ