ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ, ಬೆಂಗಳೂರು ಮೂಲದ ಮಿನಿ ರತ್ನ ಸಂಸ್ಥೆಯಾದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಹೈ-ಸ್ಪೀಡ್ ರೈಲ್ (High-Speed Rail) ವಿಭಾಗದ ಸಂಶೋಧನೆ ಮತ್ತು ಅಭಿವೃದ್ಧಿ (R&D Domain) ಯೋಜನೆಗಳಿಗಾಗಿ ವಿವಿಧ ಶ್ರೇಣಿಯ ಎಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ವೃತ್ತಿಪರರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿ.ಇ/ಬಿ.ಟೆಕ್ ಪಾಸಾದ, ಸಂಬಂಧಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರುವ ಅಭ್ಯರ್ಥಿಗಳು ಮೇ 14, 2026 ರೊಳಗೆ ಬಿಇಎಂಎಲ್ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML Limited)
- ಹುದ್ದೆಯ ಹೆಸರು: ಎಂಜಿನಿಯರ್, ಮ್ಯಾನೇಜರ್, ಹಿರಿಯ ಮ್ಯಾನೇಜರ್ ಇತ್ಯಾದಿ
- ಒಟ್ಟು ಹುದ್ದೆಗಳ ಸಂಖ್ಯೆ: 27
- ವೇತನ ಶ್ರೇಣಿ: ಮಾಸಿಕ ರೂ. 40,000 ದಿಂದ ರೂ. 2,00,000/- ರವರೆಗೆ
- ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಗಳ ವಿವರ ಮತ್ತು ಗರಿಷ್ಠ ವಯೋಮಿತಿ:
- ಹಿರಿಯ ವ್ಯವಸ್ಥಾಪಕರು : 1 ಹುದ್ದೆ (ಗರಿಷ್ಠ 39 ವರ್ಷ)
- ವ್ಯವಸ್ಥಾಪಕ: 6 ಹುದ್ದೆಗಳು (ಗರಿಷ್ಠ 34 ವರ್ಷ)
- ಸಹಾಯಕ ವ್ಯವಸ್ಥಾಪಕರು : 6 ಹುದ್ದೆಗಳು (ಗರಿಷ್ಠ 30 ವರ್ಷ)
- ಎಂಜಿನಿಯರ್: 14 ಹುದ್ದೆಗಳು (ಗರಿಷ್ಠ 29 ವರ್ಷ) (ಸೂಚನೆ: ವಯೋಮಿತಿಯನ್ನು ಮೇ 14, 2026 ಕ್ಕೆ ಅನ್ವಯವಾಗುವಂತೆ).
ವಯೋಮಿತಿ ಸಡಿಲಿಕೆ:
- ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷಗಳು
- SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
- ಅಂಗವಿಕಲ (PwD) ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ BE / B.Tech (ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ) ಪದವಿಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ನಿರ್ದಿಷ್ಟ ವರ್ಷಗಳ ವೃತ್ತಿಪರ ಅನುಭವವನ್ನು (Experience) ಕೇಳಲಾಗಿರುತ್ತದೆ.
ಸಂಬಳದ ವಿವರ (Pay Scale):
- ಹಿರಿಯ ವ್ಯವಸ್ಥಾಪಕರು: ರೂ. 70,000 – 2,00,000/-
- ವ್ಯವಸ್ಥಾಪಕ: ರೂ. 60,000 – 1,80,000/-
- ಸಹಾಯಕ ವ್ಯವಸ್ಥಾಪಕರು: ರೂ. 50,000 – 1,60,000/-
- ಎಂಜಿನಿಯರ್: ರೂ. 40,000 – 1,40,000/-
ಅರ್ಜಿ ಶುಲ್ಕ:
- ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳಿಗೆ: ರೂ. 500/-
- SC/ST ಮತ್ತು PwD ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ .
- ಪಾವತಿ ವಿಧಾನ: ಆನ್ಲೈನ್ ಮೂಲಕ.
ಆಯ್ಕೆ ಪ್ರಕ್ರಿಯೆ:
- ಅರ್ಜಿಗಳ ಮೌಲ್ಯಮಾಪನ ಮತ್ತು ಶಾರ್ಟ್ಲಿಸ್ಟಿಂಗ್
- ಸಂದರ್ಶನ / ಲಿಖಿತ ಪರೀಕ್ಷೆ (ಅಗತ್ಯವಿದ್ದರೆ)
- ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆ (Pre-employment Medical Exam)
- ದಾಖಲಾತಿ ಪರಿಶೀಲನೆ
ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29-04-2026
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-05-2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-05-2026
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು BEML ನ ಅಧಿಕೃತ ವೆಬ್ಸೈಟ್ (bemlindia.in) ಗೆ ಭೇಟಿ ನೀಡಿ “Careers” ವಿಭಾಗದಲ್ಲಿ ಲಿಂಕ್ ಪಡೆಯಬಹುದು.
- ಆನ್ಲೈನ್ ಅರ್ಜಿಯಲ್ಲಿ ಕೇಳಲಾದ ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- 10ನೇ, 12ನೇ ತರಗತಿ ಅಂಕಪಟ್ಟಿ, ಪದವಿಯ ಎಲ್ಲಾ ಸೆಮಿಸ್ಟರ್ಗಳ ಅಂಕಪಟ್ಟಿ, ಐಡಿ ಪ್ರೂಫ್ (ಆಧಾರ್/ಪ್ಯಾನ್), ಇತ್ತೀಚಿನ ಪೇ-ಸ್ಲಿಪ್, ಮತ್ತು ದಿನಾಂಕಗಳನ್ನು ಒಳಗೊಂಡಿರುವ ಅನುಭವದ ಪ್ರಮಾಣಪತ್ರಗಳನ್ನು ಸ್ಪಷ್ಟವಾಗಿ ಕಾಣುವಂತೆ (Legible copies) ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅಂತಿಮವಾಗಿ ಅರ್ಜಿಯನ್ನು ‘Submit’ ಮಾಡಿ, ರೆಫರೆನ್ಸ್ ಸಂಖ್ಯೆಯೊಂದಿಗೆ ಅರ್ಜಿಯ ಪ್ರಿಂಟ್ಔಟ್ ತೆಗೆದಿಟ್ಟುಕೊಳ್ಳಿ.
ಪ್ರಮುಖ ಲಿಂಕ್ಗಳು:
- ಅಧಿಕೃತ ಅಧಿಸೂಚನೆ: ಡೌನ್ಲೋಡ್
- ಆನ್ಲೈನ್ ಅರ್ಜಿ ಲಿಂಕ್: Apply ಮಾಡಿ
- ಅಧಿಕೃತ ವೆಬ್ಸೈಟ್: bemlindia.in