BEML ನೇಮಕಾತಿ 2026: 27 ಇಂಜಿನಿಯರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ, ಬೆಂಗಳೂರು ಮೂಲದ ಮಿನಿ ರತ್ನ ಸಂಸ್ಥೆಯಾದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಹೈ-ಸ್ಪೀಡ್ ರೈಲ್ (High-Speed Rail) ವಿಭಾಗದ ಸಂಶೋಧನೆ ಮತ್ತು ಅಭಿವೃದ್ಧಿ (R&D Domain) ಯೋಜನೆಗಳಿಗಾಗಿ ವಿವಿಧ ಶ್ರೇಣಿಯ ಎಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ವೃತ್ತಿಪರರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿ.ಇ/ಬಿ.ಟೆಕ್ ಪಾಸಾದ, ಸಂಬಂಧಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರುವ ಅಭ್ಯರ್ಥಿಗಳು ಮೇ 14, 2026 ರೊಳಗೆ ಬಿಇಎಂಎಲ್ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML Limited)
  • ಹುದ್ದೆಯ ಹೆಸರು: ಎಂಜಿನಿಯರ್, ಮ್ಯಾನೇಜರ್, ಹಿರಿಯ ಮ್ಯಾನೇಜರ್ ಇತ್ಯಾದಿ
  • ಒಟ್ಟು ಹುದ್ದೆಗಳ ಸಂಖ್ಯೆ: 27
  • ವೇತನ ಶ್ರೇಣಿ: ಮಾಸಿಕ ರೂ. 40,000 ದಿಂದ ರೂ. 2,00,000/- ರವರೆಗೆ
  • ಉದ್ಯೋಗ ಸ್ಥಳ: ಬೆಂಗಳೂರು

ಹುದ್ದೆಗಳ ವಿವರ ಮತ್ತು ಗರಿಷ್ಠ ವಯೋಮಿತಿ:

  • ಹಿರಿಯ ವ್ಯವಸ್ಥಾಪಕರು : 1 ಹುದ್ದೆ (ಗರಿಷ್ಠ 39 ವರ್ಷ)
  • ವ್ಯವಸ್ಥಾಪಕ: 6 ಹುದ್ದೆಗಳು (ಗರಿಷ್ಠ 34 ವರ್ಷ)
  • ಸಹಾಯಕ ವ್ಯವಸ್ಥಾಪಕರು : 6 ಹುದ್ದೆಗಳು (ಗರಿಷ್ಠ 30 ವರ್ಷ)
  • ಎಂಜಿನಿಯರ್: 14 ಹುದ್ದೆಗಳು (ಗರಿಷ್ಠ 29 ವರ್ಷ) (ಸೂಚನೆ: ವಯೋಮಿತಿಯನ್ನು ಮೇ 14, 2026 ಕ್ಕೆ ಅನ್ವಯವಾಗುವಂತೆ).

ವಯೋಮಿತಿ ಸಡಿಲಿಕೆ:

  • ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷಗಳು
  • SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
  • ಅಂಗವಿಕಲ (PwD) ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ಅರ್ಹತೆ:

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ BE / B.Tech (ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ) ಪದವಿಯನ್ನು ಪೂರ್ಣಗೊಳಿಸಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ನಿರ್ದಿಷ್ಟ ವರ್ಷಗಳ ವೃತ್ತಿಪರ ಅನುಭವವನ್ನು (Experience) ಕೇಳಲಾಗಿರುತ್ತದೆ.

ಸಂಬಳದ ವಿವರ (Pay Scale):

  • ಹಿರಿಯ ವ್ಯವಸ್ಥಾಪಕರು: ರೂ. 70,000 – 2,00,000/-
  • ವ್ಯವಸ್ಥಾಪಕ: ರೂ. 60,000 – 1,80,000/-
  • ಸಹಾಯಕ ವ್ಯವಸ್ಥಾಪಕರು: ರೂ. 50,000 – 1,60,000/-
  • ಎಂಜಿನಿಯರ್: ರೂ. 40,000 – 1,40,000/-

ಅರ್ಜಿ ಶುಲ್ಕ:

  • ಸಾಮಾನ್ಯ, OBC ಹಾಗೂ EWS ಅಭ್ಯರ್ಥಿಗಳಿಗೆ: ರೂ. 500/-
  • SC/ST ಮತ್ತು PwD ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ .
  • ಪಾವತಿ ವಿಧಾನ: ಆನ್‌ಲೈನ್ ಮೂಲಕ.

ಆಯ್ಕೆ ಪ್ರಕ್ರಿಯೆ:

  • ಅರ್ಜಿಗಳ ಮೌಲ್ಯಮಾಪನ ಮತ್ತು ಶಾರ್ಟ್‌ಲಿಸ್ಟಿಂಗ್
  • ಸಂದರ್ಶನ / ಲಿಖಿತ ಪರೀಕ್ಷೆ (ಅಗತ್ಯವಿದ್ದರೆ)
  • ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆ (Pre-employment Medical Exam)
  • ದಾಖಲಾತಿ ಪರಿಶೀಲನೆ

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29-04-2026
  • ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-05-2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-05-2026

ಅರ್ಜಿ ಸಲ್ಲಿಸುವ ವಿಧಾನ:

  1. ಅಭ್ಯರ್ಥಿಗಳು BEML ನ ಅಧಿಕೃತ ವೆಬ್‌ಸೈಟ್ (bemlindia.in) ಗೆ ಭೇಟಿ ನೀಡಿ “Careers” ವಿಭಾಗದಲ್ಲಿ ಲಿಂಕ್ ಪಡೆಯಬಹುದು.
  2. ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  3. 10ನೇ, 12ನೇ ತರಗತಿ ಅಂಕಪಟ್ಟಿ, ಪದವಿಯ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿ, ಐಡಿ ಪ್ರೂಫ್ (ಆಧಾರ್/ಪ್ಯಾನ್), ಇತ್ತೀಚಿನ ಪೇ-ಸ್ಲಿಪ್, ಮತ್ತು ದಿನಾಂಕಗಳನ್ನು ಒಳಗೊಂಡಿರುವ ಅನುಭವದ ಪ್ರಮಾಣಪತ್ರಗಳನ್ನು ಸ್ಪಷ್ಟವಾಗಿ ಕಾಣುವಂತೆ (Legible copies) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  4. ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  5. ಅಂತಿಮವಾಗಿ ಅರ್ಜಿಯನ್ನು ‘Submit’ ಮಾಡಿ, ರೆಫರೆನ್ಸ್ ಸಂಖ್ಯೆಯೊಂದಿಗೆ ಅರ್ಜಿಯ ಪ್ರಿಂಟ್‌ಔಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ಲಿಂಕ್‌ಗಳು:

Leave a Comment