NMPT ನೇಮಕಾತಿ 2026: ಮಾಸಿಕ ರೂ. 2,00,000 ವೇತನ

ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ, ಕರ್ನಾಟಕದ ಏಕೈಕ ಪ್ರಮುಖ ಬಂದರಾಗಿರುವ ‘ನವ ಮಂಗಳೂರು ಬಂದರು ಪ್ರಾಧಿಕಾರ’ (NMPT) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ತನ್ನ ವಿವಿಧ ವಿಭಾಗಗಳಿಗಾಗಿ (ICT, Legal, Environment & Safety, Business Development) ವೃತ್ತಿಪರ ಕಾರ್ಯನಿರ್ವಾಹಕರನ್ನು (Professional Functionaries) ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಮತ್ತು ಸಮರ್ಥ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1.20 ಲಕ್ಷ ರೂ. ಗಳಿಂದ 2.00 ಲಕ್ಷ ರೂ. ಗಳವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ. ಆಸಕ್ತರು ಮೇ 16, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ನವ ಮಂಗಳೂರು ಬಂದರು ಪ್ರಾಧಿಕಾರ (NMPT).
  • ಹುದ್ದೆಯ ಹೆಸರು: ಚೀಫ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಮ್ಯಾನೇಜರ್.
  • ಹುದ್ದೆಗಳ ಸಂಖ್ಯೆ: 12.
  • ಉದ್ಯೋಗ ಸ್ಥಳ: ಮಂಗಳೂರು

ವಿಭಾಗವಾರು ಹುದ್ದೆಗಳು ಮತ್ತು ವೇತನ ಶ್ರೇಣಿ:

  1. ಚೀಫ್ ಮ್ಯಾನೇಜರ್ (Chief Manager): 03 ಹುದ್ದೆಗಳು
    • ವೇತನ: ಮಾಸಿಕ ರೂ. 2,00,000
    • ವಯೋಮಿತಿ: ಗರಿಷ್ಠ 55 ವರ್ಷಗಳು.
  2. ಸೀನಿಯರ್ ಮ್ಯಾನೇಜರ್ (Senior Manager): 03 ಹುದ್ದೆಗಳು
    • ವೇತನ: ಮಾಸಿಕ ರೂ. 1,60,000
    • ವಯೋಮಿತಿ: ಗರಿಷ್ಠ 45 ವರ್ಷಗಳು.
  3. ಮ್ಯಾನೇಜರ್ (Manager): 06 ಹುದ್ದೆಗಳು
    • ವೇತನ: ಮಾಸಿಕ ರೂ. 1,20,000
    • ವಯೋಮಿತಿ: ಗರಿಷ್ಠ 40 ವರ್ಷಗಳು.

ಶೈಕ್ಷಣಿಕ ಅರ್ಹತೆ:

ನವ ಮಂಗಳೂರು ಬಂದರು ಪ್ರಾಧಿಕಾರ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ BE/ B.Tech , ಪದವಿ, MBA, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು

ಆಯ್ಕೆ ಪ್ರಕ್ರಿಯೆ:

  • ಸ್ವೀಕರಿಸಿದ ಅರ್ಜಿಗಳ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸಂದರ್ಶನಕ್ಕೆ (Interview) ಕರೆಯಲಾಗುವುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 17-04-2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-05-2026

ಅರ್ಜಿ ಸಲ್ಲಿಸುವ ವಿಧಾನ:

  1. ಅಭ್ಯರ್ಥಿಗಳು NMPT ಅಧಿಕೃತ ವೆಬ್‌ಸೈಟ್‌ (newmangaloreport.gov.in) ನ “Career” (ವೃತ್ತಿ) ವಿಭಾಗಕ್ಕೆ ಭೇಟಿ ನೀಡಿ ಅರ್ಜಿ ಲಿಂಕ್ ಪಡೆಯಬೇಕು.
  2. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು, ಪ್ರತ್ಯೇಕ ಅರ್ಜಿಗಳನ್ನು ಪ್ರತ್ಯೇಕ ಅರ್ಜಿ ಶುಲ್ಕದೊಂದಿಗೆ ಸಲ್ಲಿಸಬೇಕು.
  3. ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅಂತಿಮವಾಗಿ Submit ಮಾಡಬೇಕು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಪ್ರಮುಖ ಲಿಂಕ್‌ಗಳು:

  • ಅಧಿಕೃತ ಅಧಿಸೂಚನೆ: ಡೌನ್‌ಲೋಡ್
  • ಅಧಿಕೃತ ವೆಬ್‌ಸೈಟ್: newmangaloreport.gov.in

NITK ನೇಮಕಾತಿ 2026

SSC ಸ್ಟೆನೋಗ್ರಾಫರ್ ನೇಮಕಾತಿ 2026

Leave a Comment