ಬೆಂಗಳೂರು IIM ನೇಮಕಾತಿ 2026: ವಾರ್ಷಿಕ 30 ಲಕ್ಷ ರೂ. ವೇತನ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ತನ್ನ ‘ಮಿಜುಹೊ ಇಂಡಿಯಾ ಜಪಾನ್ ಸ್ಟಡಿ ಸೆಂಟರ್’ (MIJSC) ವಿಭಾಗಕ್ಕೆ ಚೀಫ್ ಆಪರೇಟಿಂಗ್ ಆಫೀಸರ್ (COO) ಹುದ್ದೆಯನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಕಾರ್ಪೊರೇಟ್ ಇಂಡಸ್ಟ್ರಿಯಲ್ಲಿ ಹಿರಿಯ ಅಥವಾ ಟಾಪ್ ಮ್ಯಾನೇಜ್ಮೆಂಟ್ ಹಂತದಲ್ಲಿ (Senior/Top Management) ಕೆಲಸ ಮಾಡಿದ ಅನುಭವ ಹೊಂದಿರುವ ಸ್ನಾತಕೋತ್ತರ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಅಂದಾಜು 30 ಲಕ್ಷ ರೂಪಾಯಿಗಳ ವೇತನ (Consultant Fee) ನೀಡಲಾಗುತ್ತದೆ. ಆಸಕ್ತರು ಮೇ 18, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB)
  • ಹುದ್ದೆಯ ಹೆಸರು: ಚೀಫ್ ಆಪರೇಟಿಂಗ್ ಆಫೀಸರ್
  • ವೇತನ ಶ್ರೇಣಿ: ವಾರ್ಷಿಕ ಅಂದಾಜು ರೂ. 30.00 ಲಕ್ಷಗಳು
  • ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ & ಅನುಭವ:

  • ಅಭ್ಯರ್ಥಿಗಳು ಕಡ್ಡಾಯವಾಗಿ ಸ್ನಾತಕೋತ್ತರ ಪದವಿಯನ್ನು (Postgraduate) ಪೂರ್ಣಗೊಳಿಸಿರಬೇಕು.
  • ಅನುಭವ: ಇಂಡಸ್ಟ್ರಿಯಲ್ಲಿ ಹಿರಿಯ/ಉನ್ನತ ನಿರ್ವಹಣಾ (Senior/Top management) ಹುದ್ದೆಗಳನ್ನು ನಿಭಾಯಿಸಿದ ಅಪಾರ ಅನುಭವ ಹೊಂದಿರಬೇಕು.
  • ಹೆಚ್ಚುವರಿ ಕೌಶಲ್ಯಗಳು: ಜಪಾನೀಸ್ ಕಂಪನಿಗಳ ಜೊತೆ ಕೆಲಸ ಮಾಡಿದ ಅನುಭವ ಅಥವಾ ಜಪಾನ್ ವ್ಯವಹಾರದ ಪರಿಚಯವಿದ್ದರೆ ಅಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ (Advantage) ನೀಡಲಾಗುವುದು.
  • ಅತ್ಯುತ್ತಮ ಸಂವಹನ ಕೌಶಲ್ಯ (ಮೌಖಿಕ ಮತ್ತು ಲಿಖಿತ) ಹೊಂದಿರಬೇಕು.

ಅರ್ಜಿ ಶುಲ್ಕ:

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ:

  • ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳನ್ನು ಮಾತ್ರ ಶಾರ್ಟ್ ಲಿಸ್ಟ್ (Shortlist) ಮಾಡಿ ಮುಂದಿನ ಪ್ರಕ್ರಿಯೆಗೆ (ಸಂದರ್ಶನ) ಕರೆಯಲಾಗುವುದು.

ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಹೊರಡಿಸಿದ ದಿನಾಂಕ: 04-05-2026
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-05-2026

ಪ್ರಮುಖ ಲಿಂಕ್‌ಗಳು:

  • ಅಧಿಕೃತ ಅಧಿಸೂಚನೆ ಪಿಡಿಎಫ್: ಡೌನ್‌ಲೋಡ್
  • ಆನ್‌ಲೈನ್ ಅರ್ಜಿ ಲಿಂಕ್: Apply ಮಾಡಿ
  • ಅಧಿಕೃತ ವೆಬ್‌ಸೈಟ್: iimb.ac.in

SSC ಸ್ಟೆನೋಗ್ರಾಫರ್ ನೇಮಕಾತಿ 2026

Leave a Comment