KSLSA ನೇಮಕಾತಿ 2026: 29 ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (KSLSA) ರಾಜ್ಯದ 16 ಜಿಲ್ಲೆಗಳಲ್ಲಿ ‘ಲೀಗಲ್ ಏಡ್ ಡಿಫೆನ್ಸ್ ಕೌನ್ಸೆಲ್ ಸಿಸ್ಟಮ್’ (LADCS) ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.

26 ‘ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ’ (Deputy Legal Aid Defense Counsel) ಹುದ್ದೆಗಳು ಸೇರಿದಂತೆ ಒಟ್ಟು 29 ಹುದ್ದೆಗಳಿಗೆ ಗುತ್ತಿಗೆ ಆಧಾರದ (Contract basis) ಮೇಲೆ ಅರ್ಹ ವಕೀಲರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಜಿಲ್ಲೆಯ DLSA ಕಚೇರಿಗೆ ಮೇ 08, 2026 ರ ಸಂಜೆ 5:00 ಗಂಟೆಯೊಳಗೆ ಆಫ್‌ಲೈನ್ ಮೂಲಕ (ಖುದ್ದಾಗಿ ಅಥವಾ ಅಂಚೆ ಮೂಲಕ) ಅರ್ಜಿ ಸಲ್ಲಿಸಬಹುದಾಗಿದೆ.

ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA)
  • ಹುದ್ದೆಯ ಹೆಸರು: ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ
  • ಒಟ್ಟು ಹುದ್ದೆಗಳ ಸಂಖ್ಯೆ: 29
  • ವೇತನ ಶ್ರೇಣಿ: 45,000 ರೂ ದಿಂದ 60,000 ರೂ ರವರೆಗೆ
  • ಉದ್ಯೋಗ ಸ್ಥಳ: ಕರ್ನಾಟಕ

KSLSA ಹುದ್ದೆಗಳ ವಿವರ:

  • ಮುಖ್ಯ ಕಾನೂನು ನೆರವು ರಕ್ಷಣಾ ಸಲಹೆಗಾರ – 01 ಹುದ್ದೆ
  • ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ – 26 ಹುದ್ದೆಗಳು
  • ಸಹಾಯಕ ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ – 02 ಹುದ್ದೆಗಳು

KSLSA ಜಿಲ್ಲಾವಾರು ಹುದ್ದೆಯ ವಿವರಗಳು: ರಾಜ್ಯದ 16 ಜಿಲ್ಲೆಗಳಲ್ಲಿ ಈ ಕೆಳಗಿನಂತೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ:

  • ಬೆಂಗಳೂರು ನಗರ: 1
  • ಬಾಗಲಕೋಟೆ: 1
  • ಬೀದರ್: 1
  • ಚಿಕ್ಕಬಳ್ಳಾಪುರ: 2
  • ಚಿತ್ರದುರ್ಗ: 2
  • ಧಾರವಾಡ: 1
  • ಗದಗ: 3
  • ಹಾಸನ: 2
  • ಕಲಬುರಗಿ: 2
  • ಕೋಲಾರ: 2
  • ರಾಮನಗರ: 2
  • ಶಿವಮೊಗ್ಗ: 3
  • ತುಮಕೂರು: 1
  • ಉಡುಪಿ: 3
  • ಉತ್ತರ ಕನ್ನಡ (ಕಾರವಾರ): 2
  • ಯಾದಗಿರಿ: 1

ಶೈಕ್ಷಣಿಕ ಅರ್ಹತೆ ಮತ್ತು ಅನುಭವ: ‘ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ’ (Deputy LADCS) ಹುದ್ದೆಗೆ:

  1. ಕಾನೂನು ಪದವಿ (LLB/LLM) ಪೂರ್ಣಗೊಳಿಸಿ, ವಕೀಲರಾಗಿ (Advocate) ನೋಂದಣಿಯಾಗಿರಬೇಕು.
  2. ಕ್ರಿಮಿನಲ್ ಕಾನೂನಿನಲ್ಲಿ (Criminal law) ಕನಿಷ್ಠ 7 ವರ್ಷಗಳ ವೃತ್ತಿ ಅನುಭವ (Practice) ಹೊಂದಿರಬೇಕು.
  3. ಸೆಷನ್ಸ್ ನ್ಯಾಯಾಲಯಗಳಲ್ಲಿ ಕನಿಷ್ಠ 20 ಕ್ರಿಮಿನಲ್ ಟ್ರಯಲ್‌ಗಳನ್ನು ನಿರ್ವಹಿಸಿರಬೇಕು.
  4. ಅತ್ಯುತ್ತಮ ಸಂವಹನ, ಕಾನೂನು ಸಂಶೋಧನಾ ಕೌಶಲ್ಯ (Legal research) ಮತ್ತು ಐಟಿ (IT) ಜ್ಞಾನ ಹೊಂದಿರಬೇಕು. (ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ಪೂರ್ಣಾವಧಿಯಾಗಿ ಕೆಲಸ ಮಾಡಬೇಕಿದ್ದು, ಯಾವುದೇ ಖಾಸಗಿ ಪ್ರಕರಣಗಳನ್ನು (Private cases) ತೆಗೆದುಕೊಳ್ಳುವಂತಿಲ್ಲ).

KSLSA ಸಂಬಳ (ಗೌರವಧನ) ವಿವರ:

  • ಮುಖ್ಯ ಕಾನೂನು ನೆರವು ರಕ್ಷಣಾ ಸಲಹೆಗಾರ – 70,000 ರಿಂದ 80,000 ರವರೆಗೆ
  • ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ 45,000 ರಿಂದ 60,000 ರವರೆಗೆ
  • ಸಹಾಯಕ ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ 30,000 ರಿಂದ 35,000 ರವರೆಗೆ

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳನ್ನು ಅವರ ಜ್ಞಾನ, ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುವುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-04-2026
  • ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-05-2026
  • ಸಂದರ್ಶನ ನಡೆಯುವ ದಿನಾಂಕ: ಜೂನ್ 20, 2026

ಅರ್ಜಿ ಸಲ್ಲಿಸುವ ವಿಧಾನ:

  1. ಆಸಕ್ತ ಅಭ್ಯರ್ಥಿಗಳು KSLSA ಅಧಿಕೃತ ವೆಬ್‌ಸೈಟ್ http://www.kslsa.kar.nic.in ಅಥವಾ ತಮ್ಮ ಜಿಲ್ಲೆಯ DLSA ಕಚೇರಿಯಿಂದ ಅರ್ಜಿ ನಮೂನೆಯನ್ನು (Application Form) ಪಡೆಯಬಹುದು.
  2. ಅರ್ಜಿ ನಮೂನೆಯನ್ನು ಸ್ಪಷ್ಟವಾಗಿ ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.
  3. ವಯಸ್ಸಿನ ಪುರಾವೆ (SSLC ಅಂಕಪಟ್ಟಿ), LLB/LLM ಅಂಕಪಟ್ಟಿಗಳು, ವಕೀಲರಾಗಿ ನೋಂದಾಯಿಸಿದ ಪ್ರಮಾಣಪತ್ರ (Enrolment certificate), ಬಾರ್ ಅಸೋಸಿಯೇಷನ್‌ನಿಂದ ಪಡೆದ ಅನುಭವ ಪ್ರಮಾಣಪತ್ರ (Experience certificate), ಮತ್ತು ತಾವು ನಿರ್ವಹಿಸಿದ 20 ಸೆಷನ್ಸ್ ಪ್ರಕರಣಗಳ ಪಟ್ಟಿ (ವಕಾಲತ್ ಪ್ರತಿಗಳೊಂದಿಗೆ) ಹಾಗೂ 5 ಕ್ರಾಸ್-ಎಕ್ಸಾಮಿನೇಷನ್ ಪ್ರತಿಗಳನ್ನು (ಸ್ವಯಂ ದೃಢೀಕರಿಸಿ) ಲಗತ್ತಿಸಬೇಕು.
  4. ಭರ್ತಿ ಮಾಡಿದ ಅರ್ಜಿಯನ್ನು ಮೇ 08, 2026 ರ ಸಂಜೆ 5:00 ಗಂಟೆಯೊಳಗೆ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್/ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

ಪ್ರಮುಖ ಲಿಂಕ್‌ಗಳು:

  • ಅಧಿಕೃತ ಅಧಿಸೂಚನೆ: ಡೌನ್‌ಲೋಡ್
  • ಅಧಿಕೃತ ವೆಬ್‌ಸೈಟ್: kslsa.kar.nic.in

ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026

ಕರ್ನಾಟಕ ಹೈಕೋರ್ಟ್‌ನಲ್ಲಿ 101 ಗ್ರೂಪ್-ಡಿ ಹುದ್ದೆಗಳ ನೇಮಕಾತಿ

Leave a Comment